ಬಿಜೆಪಿಯೊಳಗಿನ ರಗಳೆ ಸದ್ಯಕ್ಕಂತೂ ಕಮ್ಮಿಯಾಗುವಂತೆ ಕಾಣುತ್ತಿಲ್ಲ. ಬಿಜೆಪಿಯ ಪ್ರಮುಖ ನಾಯಕರ ವಿರುದ್ಧ ಕಿಡಿಕಾರಿರುವ ಜಸ್ವಂತ್ ಸಿಂಗ್ ಮತ್ತು ಯಶ್ವಂತ್ ಸಿನ್ಹಾರ ಪತ್ರದ ಬಳಿಕ ಇದೀಗ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಶೌರಿ ಸರದಿ.ಪಕ್ಷದಲ್ಲಿನ ನೀತಿನಿರ್ಧಾರಗಳನ್ನು ಕೈಗೊಳ್ಳುವ ಸ್ವರೂಪದ ಕರಿತು ಪ್ರಶ್ನಿಸಿರುವ ಜಸ್ವಂತ್ ಸಿಂಗ್ ಹಾಗೂ ಯಶವಂತ್ ಸಿನ್ಹಾ ಅವರುಗಳನ್ನು ಅರುಣ್ ಶೌರಿ ಪ್ರತಿಧ್ವನಿಸಿದ್ದಾರೆ. ಬಿಜೆಪಿಯು ಫಿತೂರಿಗಾರರ ಮುಷ್ಟಿಯಲ್ಲಿದೆ ಮತ್ತು ಅಲ್ಲಿ ಉತ್ತರದಾಯಿತ್ವದ ಸಂಪೂರ್ಣ ಲೋಪವಿದೆ ಎಂದು ಅವರು ದೂರಿದ್ದಾರೆ.ಈ ಹಿಂದಿನ ಎರಡು ಪ್ರಕರಣಗಳಿಗಂತೆ ಬಿಜೆಪಿ ಅಧ್ಯಕ್ಷ ರಾಜ್ ನಾಥ್ ಸಿಂಗ್ ಅವರು ಈ ಪತ್ರವೂ ವಿತರಣೆಯಾಗದಂತೆ ನೋಡಿಕೊಂಡಿದ್ದಾರೆ. ಶನಿವಾರ ಆರಂಭಗೊಳ್ಳಲಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ಎಲ್ಲ ವಿಚಾರಗಳು ಚರ್ಚೆಯಾಗಲಿವೆ. |