ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೋಲಿನ ಹೊಣೆ ನಾನೇ ಹೊರುವೆ: ರಾಜ್‌ನಾಥ್ ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಲಿನ ಹೊಣೆ ನಾನೇ ಹೊರುವೆ: ರಾಜ್‌ನಾಥ್ ಸಿಂಗ್
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಆಘಾತಕಾರಿ ಸೋಲಿನ ಹೊಣೆಯನ್ನು ಪಕ್ಷದ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಹೊತ್ತುಕೊಂಡಿದ್ದಾರೆ. ಆದರೆ ಇದೊಂದು ರಾಷ್ಟ್ರಮಟ್ಟದ ಕುಸಿತ ಅಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಚುನಾವಣಾ ಫಲಿತಾಂಶವು ವಿವಿಧ ರಾಜ್ಯಗಳಲ್ಲಿ ವ್ಯತ್ಯಸ್ಥವಾಗಿರುವ ಕಾರಣ ಏಕವ್ಯಕ್ತಿ ಇದಕ್ಕೆ ಜವಾಬ್ದಾರ ಎಂದು ರಾಜ್‌ನಾಥ್ ಸಿಂಗ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಕಾರಿಣಿಯಲ್ಲಿ ನುಡಿದರು. ಎರಡು ದಿನಗಳ ಕಾಲದ ಸಮಾವೇಶದಲ್ಲಿ ಪಕ್ಷದ ಸೋಲಿಗೆ ಕಾರಣ ಮತ್ತು ಅದರ ಪುನರುತ್ಥಾನಕ್ಕೆ ಮಾರ್ಗಗಳನ್ನು ಚರ್ಚಿಸಲಾಗುವುದು. ಇದು ಚುನಾವಣಾ ಫಲಿತಾಂಶದ ಬಳಿಕ ಪಕ್ಷವು ನಡೆಸುತ್ತಿರುವ ಅತಿದೊಡ್ಡ ಸಮಾವೇಶವಾಗಿದೆ.

ಕೆಲವು ದಿನಗಳಿಂದೀಚೆ ಪಕ್ಷದ ಕೆಲವು ನಾಯಕರು 2009ರ ಮಹಾ ಚುನಾವಣೆಯಲ್ಲಿ ಸೋಲಿಗೆ ಕಾರಣವೇನೆಂದು ಪ್ರಶ್ನಿಸುತ್ತಲೇ ಬಂದಿದ್ದಾರೆ.

ಪಕ್ಷವು ಹಿಂದುತ್ವ ಸಿದ್ಧಾಂತವನ್ನು ಕೈಬಿಡಲಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ಅವರು, ಹಿಂದುತ್ವ ಸಿದ್ಧಾಂತವು ಶಾಶ್ವತ, ಉದಾರವಾದುದು ಮತ್ತು ಸಹಿಷ್ಣುತೆಯಿಂದ ಕೂಡಿರುವ ಕಾರಣ ಅದನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಪಕ್ಷವು ಆರೆಸ್ಸೆಸ್‌ನೊಂದಿಗೂ ಹಿಂದಿನಂತೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗಲಿದೆ ಎಂದೂ ಹೇಳಿದರು.

ಪಕ್ಷದ ಸೋಲಿಗೆ ಒಬ್ಬ ವ್ಯಕ್ತಿಯನ್ನು ಉತ್ತರದಾಯಿಯಾಗಿಸಲು ಸಾಧ್ಯವಿಲ್ಲ ಮತ್ತು ಸೋಲಿನ ಪರಿಶೀಲನೆಯು ನಡೆಯುತ್ತಿರುವ ಪ್ರಕ್ರಿಯೆ. ಸಾಮೂಹಿಕ ಸೋಲು ಮತ್ತು ಸಾಮೂಹಿಕ ಗೆಲುವನ್ನು ಬಿಜೆಪಿ ನಂಬುತ್ತದೆ ಎಂಬುದಾಗಿ ಅವರು ತನ್ನ ಉದ್ಘಾಟನಾ ಭಾಷಣದಲ್ಲಿ ನುಡಿದರು. ಇದೇ ವೇಳೆ ಅವರು ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯ ಹೊರಗಡೆ ಚರ್ಚಿಸಬಾರದು ಎಂಬ ಬಲವಾದ ಸಂದೇಶ ರವಾಸಿರುವ ಮೂಲಕ ಕಟ್ಟುನಿಟ್ಟಿನ ಶಿಸ್ತು ಪಾಲಿಸಬೇಕು ಎಂದು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೇರಳದ ಮಹಿಳೆಯ ಪ್ರಾಣ ಉಳಿಸಿದ ವೆಬ್‌ಚಾಟ್
ಪತ್ರಸೋರಿಕೆ: ಕತಿಯಾರ್, ಜಸ್ವಂತ್ ನಡುವೆ ವಾಗ್ಯುದ್ಧ
ಬಾಳಾಠಾಕ್ರೆ ಚಿಕಿತ್ಸೆಗೆ ಧಾವಿಸಿದ ಮುಸ್ಲಿಂ ವೈದ್ಯರು
ಬಿಜೆಪಿಗೆ ಶೌರಿಯಿಂದ ಇನ್ನೊಂದು ಲೆಟರ್ ಬಾಂಬ್
ಇಂದು ಬಿಜೆಪಿ ಕಾರ್ಯಕಾರಿಣಿ ಸಭೆ
ಅಮರನಾಥ ಯಾತ್ರೆ ಪುನರಾರಂಭ