ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಾರ್ವಜನಿಕ ಹೇಳಿಕೆಗಳನ್ನು ನಿಲ್ಲಿಸಿ: ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾರ್ವಜನಿಕ ಹೇಳಿಕೆಗಳನ್ನು ನಿಲ್ಲಿಸಿ: ಆಡ್ವಾಣಿ
ಚುನಾವಣೆಯಲ್ಲಿ ಬಿಜೆಪಿಯು ಅನಿರೀಕ್ಷಿತ ಸೋಲನುಭವಿಸಿದ ಬಳಿಕ ಮೊದಲ ಬಾರಿ ಮಹ್ವದ ಭಾಷಣ ಮಾಡಿದ ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು, ಸೋಲಿನ ಪ್ರಾಮಾಣಿಕ ಆತ್ಮಾವಲೋಕನದ ಅಗತ್ಯವಿದೆ. ಆದರೆ ನಾಯಕರು ವೈಯಕ್ತಿಕ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ತಪ್ಪು ಎಂದು ಹೇಳಿದರು.

ಪಕ್ಷದ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ತಮ್ಮ ಭಿನ್ನಮತವನ್ನು ಮಾಧ್ಯಮದಲ್ಲಿ ಬಹಿರಂಗ ಪಡಿಸಬಾರದು ಎಂಬುದಾಗಿ ಅವರು ಕಿವಿಮಾತು ಹೇಳಿದರು. ಅವರು ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡುತ್ತಿದ್ದರು.

"ನಾವು ಆತ್ಮಾವಲೋಕನದಲ್ಲಿ ಹಿಂದೆ ಬೀಳಬಾರದು. ಅತ್ಮಾವಲೋಕನಕ್ಕೂ ಬೇರೆಯವರತ್ತ ಬೆಟ್ಟು ಮಾಡುವುದಕ್ಕೂ ವ್ಯತ್ಯಾಸವಿದೆ. ಚುನಾವಣಾ ಫಲಿತಾಂಶಕ್ಕೆ ಪ್ರಬುದ್ಧವಾಗಿ ಪ್ರತಿಕ್ರಿಯಿಸಬೇಕು ಮತ್ತು ಮತ್ತೆ ಚಿಗಿತುಕೊಳ್ಳಬೇಕು" ಎಂದು ಅವರು ಅವರು ಪಕ್ಷದ ನಾಯಕರಿಗೆ ಸಲಹೆ ನೀಡಿದರು.

ಜಸ್ವಂತ್ ಸಿಂಗ್, ಯಶ್ವಂತ್ ಸಿನ್ಹಾ ಹಾಗೂ ಅರುಣ್ ಶೌರಿ ಅವರ ಬಂಡಾಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಆಡ್ವಾಣಿ, ವಿಭಿನ್ನ ಅಭಿಪ್ರಾಯಗಳನ್ನು ಮಂಡಿಸಲು ಪಕ್ಷದೊಳಗೆ ಅವಕಾಶವಿದೆ ಎಂಬುದು ಕಾರ್ಯಕರ್ತರಿಗೆ ಮನದಟ್ಟಾಗಬೇಕು ಮತ್ತು ಪಕ್ಷದ ಶಿಸ್ತಿನ ಸಂಸ್ಕೃತಿಯನ್ನು ಯಾರೂ ಮರೆಯಬಾರದು ಹಾಗೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಬಾರದು ಎಂದು ಹೇಳಿದರು.

ಹಿಂದುತ್ವ ಬಿಡೆವು
ಹಿಂದುತ್ವದ ಕುರಿತು ಪಕ್ಷದ ನಿಲುವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಒಂದೇ ಧರ್ಮದ ಹಿತರಕ್ಷಣೆಗಾಗಿ ಬಿಜೆಪಿ ಹೋರಾಡುತ್ತಿದೆ ಅಂದುಕೊಳ್ಳಬಾರದು ಎಂಬುದಾಗಿ ಆಡ್ವಾಣಿ ಆರೆಸ್ಸೆಸ್‌ನ ದಿವಂಗತ ನಾಯಕ ಬಾಳಾಸಾಹೇಬ್ ದೇವರಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.

ಪಕ್ಷವು ಹಿಂದುತ್ವವನ್ನು ಬಿಡುವುದಿಲ್ಲ ಮತ್ತು ಆರೆಸ್ಸೆಸ್‌ನೊಂದಿಗೆ ಸಂಬಂಧ ಕಡಿದುಕೊಳ್ಳುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಅದಾಗ್ಯೂ, ಏಕತತ್ವ ರಾಷ್ಟ್ರದ ಪರಿಕಲ್ಪತೆಯನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ರಥಯಾತ್ರೆ
ಪಕ್ಷದ ಮುಂದಿರುವ ಸವಾಲು ಹಾಗೂ ಅವಕಾಶಗಳ ಕುರಿತು ಕಾರ್ಯಕರ್ತರಿಗೆ ಮರ್ಗದರ್ಶನ ನೀಡಲು ಮತ್ತೊಂದು ರಥಯಾತ್ರೆ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು. ಇದೇವೇಳೆ ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್‌ಗಳಲ್ಲಿ ಸಿದ್ಧರಾಗುವಂತೆ ಪಕ್ಷದ ಸ್ವಂತಬಲ ಹೆಚ್ಚಿಸಿಕೊಳ್ಳುವ ಹಾಗೂ ಮಿತ್ರಪಕ್ಷಗಳ ಜತೆಗೆ ಸಂಬಂಧ ಗಟ್ಟಿಮಾಡಿಕೊಳ್ಳುವ ಅಗತ್ಯಇದೆ ಎಂದು ಅವರು ಪ್ರತಿಪಾದಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡೆಹ್ರಾಡೂನ್: ಹೆಣ್ಣು ಹುಲಿ ಸಾವು
ಒರಿಸ್ಸಾ: ನಕ್ಸಲರಿಂದ ಅಪಹೃತ ಬಸ್ ಬಿಡುಗಡೆ
ಬಿಜೆಪಿ ಕಾರ್ಯಕಾರಿಣಿಯಲ್ಲಿ ನಾಯಕರ ಜಟಾಪಟಿ
ಲಾಲ್‌ಗರ್ ಪರಿಸ್ಥಿತಿ ಸೂಕ್ಷ್ಮವಾಗಿದೆ: ಚಿದಂಬರಂ
ಇಸ್ಲಾಂವಿರೋಧಿ ಹೇಳಿಕೆ: ಶಾರೂಕ್‌ ಖಾನ್‌ಗೆ ಫತ್ವಾ
ಚತ್ತೀಸ್‌ಗಢದಲ್ಲಿ ನಕ್ಸಲರ ಉಗ್ರ ನರ್ತನ: 11 ಬಲಿ