ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹಂದಿಜ್ವರ: ಮತ್ತೆ 3 ಪ್ರಕರಣಗಳು, ಒಟ್ಟು 59
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಂದಿಜ್ವರ: ಮತ್ತೆ 3 ಪ್ರಕರಣಗಳು, ಒಟ್ಟು 59
ಅಮೆರಿಕದಿಂದ ಭಾರತಕ್ಕೆ ಆಗಮಿಸಿರುವ ಮತ್ತೆ ಮೂವರಲ್ಲಿ ಹಂದಿಜ್ವರ ಲಕ್ಷಣಗಳು ಪತ್ತೆಯಾಗಿದ್ದು, ಇದರಿಂದಾಗಿ ರಾಷ್ಟ್ರದಲ್ಲಿ ಒಟ್ಟು ಸೋಂಕು ಪೀಡಿತರ ಸಂಖ್ಯೆ 59ಕ್ಕೇರಿದೆ.

ಚೆನ್ನೈಯಿಂದ ಎರಡು ಪ್ರಕರಣಗಳು ಪತ್ತೆಯಾಗಿದ್ದರೆ, ಮೂರನೆ ಪ್ರಕರಣವು ದೆಹಲಿಯಲ್ಲಿ ಪತ್ತೆಯಾಗಿದೆ. ಸೋಂಕು ಪೀಡಿತ ದಂಪತಿಗಳು ಚೆನ್ನೈಲ್ಲಿ ಬಂದಿಳಿದರೆ, ಇನ್ನೋರ್ವ 15ರ ಹರೆಯದ ಬಾಲಕ ದೆಹಲಿಯಲ್ಲಿ ಬಂದಿಳಿದಿದ್ದಾನೆ.

ಉತ್ತರ ಕೆರೋಲಿನಾದಿಂದ ಚೆನ್ನೈಗೆ ಜೂನ್ 13ರಂದು ಬಂದಿಳಿದ 29ರ ಹರೆಯ ವ್ಯಕ್ತಿ ಹಾಗೂ ಆತನ 25ರ ಹರೆಯದ ಪತ್ನಿ ಇಬ್ಬರಲ್ಲೂ ಹಂದಿಜ್ವರದ ಲಕ್ಷಣಗಳು ಇರುವುದಾಗಿ ವರದಿಯಾಗಿತ್ತು. ಅವರಿಬ್ಬರಿಗೂ ಹಂದಿಜ್ವರ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂಬುದಾಗಿ ಆರೋಗ್ಯ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಬಾಲಕ ಜೂನ್ 17ರಂದು ನ್ಯೂಯಾರ್ಕ್‌ನಿಂದ ಬಂದಿಳಿದಿದ್ದ.

ಇದುವರೆಗೆ ದಾಖಲಾಗಿರುವ ಒಟ್ಟು 59 ಪ್ರಕರಣಗಳಲ್ಲಿ 32 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮಿಕ್ಕರು ರಾಷ್ಟ್ರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ತನಕ 421 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು ಇವರಲ್ಲಿ 59 ಮಂದಿಗೆ ಎಚ್1ಎನ್1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಇವರಲ್ಲಿ ಆರು ಮಂದಿಗೆ ವಿದೇಶದಿಂದ ಬಂದವರಿಂದ ಸೋಂಕು ತಗುಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾರ್ವಜನಿಕ ಹೇಳಿಕೆಗಳನ್ನು ನಿಲ್ಲಿಸಿ: ಆಡ್ವಾಣಿ
ಡೆಹ್ರಾಡೂನ್: ಹೆಣ್ಣು ಹುಲಿ ಸಾವು
ಒರಿಸ್ಸಾ: ನಕ್ಸಲರಿಂದ ಅಪಹೃತ ಬಸ್ ಬಿಡುಗಡೆ
ಬಿಜೆಪಿ ಕಾರ್ಯಕಾರಿಣಿಯಲ್ಲಿ ನಾಯಕರ ಜಟಾಪಟಿ
ಲಾಲ್‌ಗರ್ ಪರಿಸ್ಥಿತಿ ಸೂಕ್ಷ್ಮವಾಗಿದೆ: ಚಿದಂಬರಂ
ಇಸ್ಲಾಂವಿರೋಧಿ ಹೇಳಿಕೆ: ಶಾರೂಕ್‌ ಖಾನ್‌ಗೆ ಫತ್ವಾ