ಪೊಲೀಸರೊಂದಿಗಿನ ಗುಂಡಿನ ಕಾದಾಟದ ವೇಳೆಗೆ ಇಬ್ಬರು ಮಾವೋವಾದಿಗಳು ಮಾಲ್ಕನ್ಗಿರಿ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಇಲ್ಲಿಂದ 620 ಕಿಲೋಮೀಟರ್ ದೂರದಲ್ಲಿರುವ ಮಾಲ್ಕನ್ಗಿರಿಯಲ್ಲಿ ಭದ್ರತಾ ತಪಾಸಣೆ ವೇಳೆಗೆ ಚೀಲದಲ್ಲಿ ಬಂಡುಕೋರರು ಹ್ಯಾಂಡ್ ಗ್ರೆನೇಡ್ ಒಯ್ಯುತ್ತಿದ್ದುದು ಪತ್ತೆಯಾಗಿತ್ತು. ಇವರು ಪಕ್ಕದ ಕಾಡಿನಲ್ಲಿ ಪರಾರಿಯಾಗಲೆತ್ನಿಸಿದ್ದು ಈ ವೇಳೆ ಪೊಲೀಸರ ಗುಂಡಿಗೆ ಬಲಿಯಾದರು ಎಂಬುದಾಗಿ ಡಿಐಜಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಮೃತ ನಕ್ಸಲರಿಂದ ಎರಡು 9ಎಂಎಂ ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಒರಿಸ್ಸಾ ಸೇರಿದಂತೆ ಐದು ರಾಜ್ಯಗಳಲ್ಲಿ ನಕ್ಸಲರು ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಬಂಡುಕೋರರು ಪೊಲೀಸರ ಮೇಲೆ ದಾಳಿ ನಡೆಸಲು ಯೋಜಿಸಿದ್ದರು ಎಂಬುದಾಗಿ ಪೊಲೀಸರು ಸಂಶಯಿಸಿದ್ದಾರೆ. |