ವಿಶ್ವದಲ್ಲೇ ಜಾಮೀನು ಪಡೆದುಕೊಂಡ ಅತ್ಯಂತ ಕಿರಿಯ ವ್ಯಕ್ತಿ ಇಲ್ಲಿದ್ದಾರೆ! ವರದಕ್ಷಿಣೆ ಕಿರುಕುಳ ಸಂಬಂಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಲಾಗಿರುವ 2 ತಿಂಗಳ ಹರೆಯದ ಹಸುಗೂಸು ಜೋಯಾ ಖಾನ್ ಈ ದಾಖಲೆ ಮಾಡಿದ ಪುಟಾಣಿ.
ಈ ಮಗುವಿನ ಮಲ ತಾಯಿ ಶಕೀಲಾ ಎಂಬಾಕೆ, ತನ್ನ ಗಂಡ ಅಂದರೆ ಆ ಮಗುವಿನ ಅಪ್ಪನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದು, ದೂರಿನಲ್ಲಿ ಈ ಮಗುವೂ ಸೇರಿದಂತೆ ಇಡೀ ಕುಟುಂಬವನ್ನು ಆರೋಪಿಗಳಾಗಿ ಹೆಸರಿಸಿದ್ದಳು.
ಕಳೆದ ವಾರ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಖಾನ್ ಕುಟುಂಬವನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ತನ್ನ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ಬಂದ ಈ ಮಗು, ಅಲ್ಲೇ ಸುಮಾರು ಹತ್ತು ಗಂಟೆಗಳನ್ನು ಕಳೆಯಬೇಕಾಗಿತ್ತು. ಆ ಬಳಿಕ ಕುಟುಂಬದೊಂದಿಗೆ ಈ ಮಗುವಿಗೂ ನಿರೀಕ್ಷಣಾ ಜಾಮೀನು ದೊರೆಯಿತು.
ಮಲತಾಯಿಯು ನೀಡಿದ ದೂರಿನಲ್ಲಿ ಜೋಯಾ ಹೆಸರಿದ್ದರೂ, ಪೊಲೀಸರು ಎಫ್ಐಆರ್ ದಾಖಲಿಸುವಾಗ ಆ ಹೆಸರನ್ನು ನಮೂದಿಸಲಿಲ್ಲ. |