ದೇಶದಲ್ಲಿ ನಕ್ಸಲರ ಅಟ್ಟಹಾಸ ಹೆಚ್ಚತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಾವೋವಾದಿ ಸಂಘಟನೆಗೆ ಸೋಮವಾರ ನಿಷೇಧ ಹೇರಿದ್ದು ಅದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.
ಕೇಂದ್ರ ಗೃಹ ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ. ಇದರಿಂದಾಗಿ ಉಲ್ಫಾ, ಲಷ್ಕರೆ ಸೇರಿದಂತೆ ಒಟ್ಟು 34 ಸಂಘಟನೆಗಳನ್ನು ಉಗ್ರವಾದಿ ಸಂಘಧಟನೆ ಎಂದು ಘೋಷಿಸಿದಂತಾಗಿದೆ.
ಎಡರಂಗದ ವಿರೋಧ ರಾಜ್ಯದಲ್ಲಿನ ಮಾವೋವಾದಿ ಸಂಘಟನೆಗಳನ್ನು ನಿಷೇಧಿಸುವ ಕುರಿತು ಪರಿಗಣಿಸುವುದಾಗಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ದಜಿ ಹೇಳಿಕೆ ನೀಡಿರುವ ಎರಡು ದಿನದ ಬಳಿಕ, ಆಡಳಿತಾರೂಢ ಎಡರಂಗವು ಮಾವೂವಾದಿ ಸಂಘಟನೆಯ ನಿಷೇಧವನ್ನು ತಾನು ವಿರೋಧಿಸುವುದಾಗಿ ಹೇಳಿದೆ.
ಮಾವೋವಾದಿಗಳನ್ನು ನಾವು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ನಿಭಾಯಿಸುತ್ತೇವೆ ಎಂದು ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಹೇಳಿದ್ದಾರೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಲಾಲ್‌ಗರ್ ಅನ್ನು ಮಾವೋವಾದಿಗಳು ವಶಪಡಿಸಿಕೊಂಡ ಬಳಿಕ ಮಾವೋವಾದಿ ಸಂಘಟನೆಗೆ ನಿಷೇಧ ಹೇರುವಂತೆ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಹೇಳಿದ್ದರು.
ಈ ಹಿಂದೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಮಾವೋವಾದಿಗಳಿಗೆ ನಿಷೇಧ ಹೇರುವುದನ್ನು ವಿರೋಧಿಸಿದ್ದರು. ಚತ್ತಿಸ್‌ಗಢ ಮತ್ತು ಜಾರ್ಖಂಡ್‌ಗಳಲ್ಲಿ ಇವುಗಳಿಗೆ ನಿಷೇಧ ಹೇರಿರುವುದರಿಂದ ಅಲ್ಲಿನ ಭದ್ರತಾ ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಅವರು ಹೇಳಿದ್ದರು. |