ಉತ್ತರ ಪ್ರದೇಶದ ಹಲವು ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳು ಕ್ಯಾಂಪಸ್ಸಿನಲ್ಲಿ ಜೀನ್ಸ್ ತೊಡುವುದರ ಮೇಲೆ ನಿಷೇಧ ಹೇರುವ ಮತ್ತು ಉಡುಪು ಸಂಹಿತೆಯನ್ನು ಜಾರಿಗೆ ತರಲು ಯೋಜಿಸುತ್ತಿದ್ದಾರೆ ಎಂಬುದಾಗಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ." ಈ ಪ್ರಸ್ತಾಪವನ್ನು ಇತ್ತೀಚೆಗೆ ಉತ್ತರ ಪ್ರದೇಶದ ಪ್ರಾಂಶುಪಾಲರ ಸಂಘಟನೆಯು(ಯುಪಿಪಿಎ) ರೂಪಿಸಿದೆ. ಈ ಸಂಘಟನೆಯಲ್ಲಿ ರಾಜ್ಯದ ಸುಮಾರು 400 ಪದವಿ ಕಾಲೇಜುಗಳ ಸದಸ್ಯತ್ವವಿದೆ. ವಿದ್ಯಾರ್ಥಿಗಳು, ಹೆತ್ತವರು ಮತ್ತು ಪೋಷಕರೊಂದಿಗೆ ಚರ್ಚಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂಬುದಾಗಿ ಯುಪಿಪಿಎ ಸಂಚಾಲಕ ಅಶೋಕ್ ಶ್ರೀವಾಸ್ತವ ಹೇಳಿದ್ದಾರೆ.ಕಾಲೇಜಿನಲ್ಲಿ ಶಿಸ್ತು ಮತ್ತು ನಿಯಂತ್ರಣದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು ಇದರಿಂದಾಗಿ ಕೆಲವು ಕಾಲೇಜು ವಿದ್ಯಾರ್ಥಿಗಳು ಧರಿಸುವ ಅಶ್ಲೀಲ ಬಟ್ಟೆಗಳ ಪ್ರದರ್ಶನವನ್ನು ತಡೆಯಬಹುದಾಗಿ ಎಂದು ಅವರು ಹೇಳಿದ್ದಾರೆ.ಕೆಲವು ದಿನಗಳ ಹಿಂದೆ ಕಾನ್ಪರದ ನಾಲ್ಕುಪದವಿ ಕಾಲೇಜುಗಳು ವಿದ್ಯಾರ್ಥಿನಿಯರನ್ನು ಚುಡಾಯಿಸುವುದರಿಂದ ತಪ್ಪಿಸಲು ಜೀನ್ಸ್, ಬಿಗಿಯಾದ ಶರ್ಟ್, ಟಾಪ್‌ಗಳು, ತೋಳಿಲ್ಲದ ಶರ್ಟ್, ಎತ್ತರ ಹಿಮ್ಮಡಿಯ ಚಪ್ಪಲಿ, ಬಿಗಿಯಾದ ಉಡುಪುಗಳನ್ನು ಧರಿಸುವುದರ ವಿರುದ್ಧ ನಿಷೇಧ ಹೇರಿದ್ದವು.ಆಚಾರ್ಯ ನರೇಂದ್ರ ಕಾಲೇಜು, ದಯಾನಂದ ಮಹಿಳಾ ಪದವಿ ಕಾಲೇಜು, ಸೇನ್ ಬಾಲಿಕಾ ಕಾಲೇಜು ಹಾಗೂ ಜೋಹರಿ ದೇವಿ ಪದವಿ ಕಾಲೇಜುಗಳಲ್ಲಿ ಈ ಹೊಸ ನಿಯಮ ಜಾರಿಗೊಳಿಸಲಾಗಿದೆ. |