ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಕ್ಸಲರು ಮಾತುಕತೆಗೆ ಸಿದ್ಧ, ಕದನ ವಿರಾಮಕ್ಕೆ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲರು ಮಾತುಕತೆಗೆ ಸಿದ್ಧ, ಕದನ ವಿರಾಮಕ್ಕೆ ಕರೆ
ತಾವು ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿರುವ ನಕ್ಸಲರು, ಆದರೆ ಸರ್ಕಾರ ಕದನ ವಿರಾಮ ಘೋಷಿಸಬೇಕು ಎಂಬ ಪೂರ್ವಷರತ್ತು ಹೇರಿದ್ದಾರೆ.

"ಭಾನುವಾರ ಹಿಂಸಾಜರ್ಜರಿತ ಲಾಲ್‌ಗರ್‌ಗೆ ಭೇಟಿ ನೀಡಿದ ಬುದ್ಧಿಜೀವಿಗಳು ಮಾತುಕತೆಗೆ ವ್ಯವಸ್ಥೆ ಮಾಡಿದರೆ, ತಾವು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ" ಎಂದು ಮಾವೋವಾದಿ ನಾಯಕ ಸಾಗರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಆದರೆ, ಲಾಲ್‌ಗರ್‌ನಿಂದ ಕೇಂದ್ರೀಯ ಅರೆಸೇನಾ ಪಡೆಗಳನ್ನು ವಾಪಸು ಪಡೆದರೆ ಮತ್ತು ರಾಜ್ಯ ಸರ್ಕಾರವು ಕದನವಿರಾಮ ಘೋಷಿಸಿದರೆ ಮಾತ್ರ ಮಾತುಕತೆಗೆ ಮುಂದಾಗುತ್ತೇವೆ ಎಂದು ಸಂಘಟನೆಯ ವಕ್ತಾರ ಗೌರ್ ಚಕ್ರವರ್ತಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮಾತುಕತೆಗೆ ಮುನ್ನ ಶಾಂತಿ ಸ್ಥಾಪನೆಗಾಗಿ ತಾವು ಪೂರ್ವಷರತ್ತನ್ನು ಹೇರುವುದಾಗಿ ಚಕ್ರವರ್ತಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
5 ಪೊಲೀಸರಿಂದ ಠಾಣೆಯಲ್ಲೇ ಅತ್ಯಾಚಾರ: ಮಹಿಳೆ ದೂರು
ವಿಎಚ್‌ಪಿ ನಿಷೇಧಿಸಿ, ನಕ್ಸಲರಿಗೆ ಬೇಡ: ಕಾರಟ್ ದ್ವಂದ್ವ
ನೀವು ವಿದ್ಯಾರ್ಥಿಗಳ ಜೀವದೊಂದಿಗೆ ಆಡುತ್ತಿದ್ದೀರಿ: ಸರ್ಕಾರಕ್ಕೆ ಸು.ಕೋ ತರಾಟೆ
ಯುಪಿ ಕಾಲೇಜುಗಳಲ್ಲಿ ಜೀನ್ಸ್‌ಗೆ ನಿಷೇಧ ಚಿಂತನೆ
ವರುಣ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿಕೆ
ಅಮರನಾಥ ಯಾತ್ರಿಕನೊಬ್ಬನ ಸಾವು