ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಂಡ ಮುಸ್ಲಿಮರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಂಡ ಮುಸ್ಲಿಮರು
ಸಹೋದರತ್ವ ಹಾಗೂ ಸಹಬಾಳ್ವೆಯನ್ನು ಬಿಂಬಿಸುವ 132ನೇ ಲಾರ್ಡ್ ಜಗನ್ನಾಥ್ ರಥಯಾತ್ರೆ ಉತ್ಸವ ಇಂದು ಆರಂಭವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಸ್ಲಿಮರು ರಥಯಾತ್ರೆಯಲ್ಲಿ ಪಾಲ್ಗೊಳ್ಳುವುದು ಇದು ಮೊದಲ ಬಾರಿಯಲ್ಲ. ಹಲವು ವರ್ಷಗಳಿಂದ ಹಿಂದೂಗಳು ರಥಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮುಸ್ಲಿಮರು ಭಾಗವಹಿಸುತ್ತಿದ್ದಾರೆ. ಜನರು ಪರಸ್ಪರರ ಧರ್ಮ ಮತ್ತು ಸಂಪ್ರದಾಯಗಳನ್ನು ಗೌರವಿಸಿ, ಶಾಂತಿ ಸಹಬಾಳ್ವೆಗೆ ನಾಂದಿ ಹಾಡಬೇಕು ಎಂದು ಜಮಾತ್-ಎ-ಇಸ್ಲಾಂನ ಅಧ್ಯಕ್ಷ ಮೌಲಾನಾ ಶಫಿ ಮದನಿ ಹೇಳಿದ್ದಾರೆ.

ಜಗನ್ನಾಥ್ ಮಂದಿರದಲ್ಲಿರುವ ರಥಕ್ಕೆ ಕೆಲ ಮುಸ್ಲಿಮರು ನೆನಪಿನ ಕಾಣಿಕೆಯಾಗಿ ಅರ್ಚಕರಿಗೆ ಉಡುಗೊರೆಗಳನ್ನು ನೀಡಿದ್ದಾರೆ. ಜಗನ್ನಾಥ್ ರಥೋತ್ಸವದಲ್ಲಿ ಕಳೆದ ಹಲವಾರು ವರ್ಷಗಳಿಂದ ಮುಸ್ಲಿಮರು ಭಾಗವಹಿಸುತ್ತಿದ್ದಾರೆ.ಮುಸ್ಲಿಮರು ಸಿಹಿ ತಿಂಡಿಗಳನ್ನು ಹಂಚಿ ರಥೋತ್ಸವ ಶಾಂತಿಯುತವಾಗಿ ಸಾಗಲಿ ಎಂದು ಹಾರೈಸುವುದಾಗಿ ಖಾನ್‌ಪುರ್ ನಿವಾಸಿ ಗುಲಾಂ ಖಾದರ್ ತಿಳಿಸಿದ್ದಾರೆ.

ಪ್ರಸಕ್ತ ವರ್ಷ ಅಹಮದಾಬಾದ್‌ನ ತಾಜಿಯಾ ಸಮಿತಿ ಶೀಗಂಧದಿಂದ ಮಾಡಿದ ಗಾಂಧೀಜಿಯವರ ಭಾವಚಿತ್ರ ಮತ್ತು ಅವರ ಕೋಮಸೌಹಾರ್ದ ಸಂದೇಶವನ್ನು ಸಾರುವ ಅಕ್ಷರಗಳನ್ನು ಮುತ್ತುಗಳಿಂದ ಜೋಡಿಸಿ ನಿರ್ಮಾಣ ಮಾಡಲಾಗಿದೆ.ಧರ್ಮಗಳು ಜನರನ್ನು ಒಂದುಗೂಡಿಸಬೇಕು ಹೊರತು ಒಡೆಯಬಾರದು. ರಥಯಾತ್ರೆಯ ಸಂದರ್ಭದಲ್ಲಿ ಅರ್ಚಕರನ್ನು ಭೇಟಿ ಮಾಡಿ ಶುಭವಾಗಲಿ ಎಂದು ಹಾರೈಸಿ, ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ರಥಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಾಜಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ವಿ.ಮೊಮಿನ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರತಿಮಾ-ಪ್ರಿಯೆ 'ಮಾಯೆ': ಬೊಕ್ಕಸಕ್ಕೆ ಕೋಟಿಕೋಟಿ ಹೊಡೆತ
ಜೀನ್ಸ್‌‌ಗೆ ನಿಷೇಧ ಬೇಡ: ಕಾಲೇಜಿಗೆ ಸರ್ಕಾರ
ವಿಜಯಕುಮಾರ್‌ಗೆ ದೆಹಲಿ ಪೊಲೀಸ್ ಮುಖ್ಯಸ್ಥರ ಪಟ್ಟ?
ಪುಣೆಗೆ ತಲುಪಿದ ಹಂದಿಜ್ವರ
ಅಮರನಾಥ ಯಾತ್ರೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
ಲಖ್ವಿ, ಹಫೀಜ್ ಸಹಿತ 22 ಪಾಕಿಗಳ ವಿರುದ್ಧ ವಾರಂಟ್