ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜಧಾನಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಧಾನಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ
ನವದೆಹಲಿ: ಮಹಿಳೆಯೇ ಮುಖ್ಯಮಂತ್ರಿಯಾಗಿರುವ ದೇಶದ ರಾಜಧಾನಿ ನವದೆಹಲಿಯಲ್ಲಿ ಮಹಿಳೆಯ ಮೇಲಿನ ಅತ್ಯಾಚಾರ ಸರಣಿಗೆ ಹೊಸ ಸೇರ್ಪಡೆಯಾಗಿದ್ದು, ಉತ್ತರ ದೆಹಲಿಯಲ್ಲಿ ಪೊಲೀಸರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ಬೆನ್ನಿಗೇ, ಮಂಗಳವಾರ ರಾತ್ರಿ ಇನ್ನೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಲಾಗಿದೆ.

ಪೂರ್ವ ದೆಹಲಿಯ ಭೋಲಾನಾಥ್ ನಗರದಲ್ಲಿ ಗಂಡನಿಲ್ಲದ ವೇಳೆ ಮನೆಗೆ ಪ್ರವೇಶಿಸಿದ ಮೂವರು ಅಪರಿಚಿತ ಪುರುಷರು ಅತ್ಯಾಚಾರ ನಡೆಸಿರುವುದಾಗಿ 24ರ ಹರೆಯದ ಮಹಿಳೆ ದೂರು ನೀಡಿದ್ದಾಳೆ. ಅತ್ಯಾಚಾರಿಗಳಲ್ಲೊಬ್ಬಾತ ಆಕೆಯ ಗಂಡನ ಗೆಳೆಯ. ಈ ಬಗ್ಗೆ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಮೂವರು ಪುರುಷರು ಆಕೆಗೆ ಎಚ್ಚರಿಸಿ ಹೋಗಿದ್ದಾರೆ.

ಆರೋಪಿಗಳಲ್ಲಿ ಮೂವರು ಕೂಡ ಉತ್ತರ ಪ್ರದೇಶದ ಬುಲಂದ್‌ಶಹರ್‌ನವರು. ಇದೀಗ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕಾಂಗ್ರೆಸ್ ಮುಖ್ಯಮಂತ್ರಿ, ಅದೂ ಮಹಿಳೆಯೇ ರಾಜ್ಯವಾಳುತ್ತಿರುವಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ದೇಶಾದ್ಯಂತ ಆಕ್ರೋಶದ ಅಲೆಗಳನ್ನು ಎಬ್ಬಿಸಿದೆ. ಕಳೆದ ವರ್ಷ, ಬಿಜೆಪಿ ಸರಕಾರವಿರುವ ಕರ್ನಾಟಕದಲ್ಲಿ ಪಬ್‌ಗೆ ಹೋದ ಮಹಿಳೆಯರ ಮೇಲೆ ನಡೆದ ದಾಳಿ ಸಂದರ್ಭ ಇದೇ ರೀತಿ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಇತ್ಯಾದಿ ಚರ್ಚೆಯಾಗಿರುವುದು ಇಲ್ಲಿ ಸ್ಮರಣಾರ್ಹ.

ಸಂಬಂಧಿತ ವರದಿ: ಹೊಲ ಮೇಯುವ ಬೇಲಿ: ಪೊಲೀಸರಿಂದ ಅತ್ಯಾಚಾರ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಂಡ ಮುಸ್ಲಿಮರು
ಪ್ರತಿಮಾ-ಪ್ರಿಯೆ 'ಮಾಯೆ': ಬೊಕ್ಕಸಕ್ಕೆ ಕೋಟಿಕೋಟಿ ಹೊಡೆತ
ಜೀನ್ಸ್‌‌ಗೆ ನಿಷೇಧ ಬೇಡ: ಕಾಲೇಜಿಗೆ ಸರ್ಕಾರ
ವಿಜಯಕುಮಾರ್‌ಗೆ ದೆಹಲಿ ಪೊಲೀಸ್ ಮುಖ್ಯಸ್ಥರ ಪಟ್ಟ?
ಪುಣೆಗೆ ತಲುಪಿದ ಹಂದಿಜ್ವರ
ಅಮರನಾಥ ಯಾತ್ರೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ