ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂಸದ ವರುಣ್ ಗಾಂಧಿ ವಿರುದ್ಧ ಆರೋಪಪಟ್ಟಿ ಸಿದ್ಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸದ ವರುಣ್ ಗಾಂಧಿ ವಿರುದ್ಧ ಆರೋಪಪಟ್ಟಿ ಸಿದ್ಧ
PTIPTI
ಭಾರತೀಯ ಜನತಾಪಕ್ಷದ ಸಂಸತ್ ಸದಸ್ಯ ವರುಣ್ ಗಾಂಧಿ ವಿರುದ್ಧ ಆರೋಪಪಟ್ಟಿ ಸಿದ್ಧವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಅವರು ಫಿಲಿಬಿಟ್ ಕ್ಷೇತ್ರದಲ್ಲಿ ಮಾಡಿದ ದ್ವೇಷ ಬಿತ್ತುವ ಭಾಷಣದ ಮ‌ೂರು ಸಿಡಿಗಳ ನೈಜತೆಯನ್ನು ವಿಧಿವಿಜ್ಞಾನ ತಜ್ಞರು ದೃಢಪಡಿಸಿದ ಬಳಿಕ ಪೊಲೀಸರು ಆರೋಪಪಟ್ಟಿ ಸಲ್ಲಿಕೆಗೆ ಸಿದ್ಧರಾಗಿದ್ದಾರೆ.

ಆರೋಪಪಟ್ಟಿ ಸಲ್ಲಿಸಲು ಸರ್ಕಾರದ ಅನುಮತಿಗೆ ನಾವು ಕಾಯುತ್ತಿದ್ದೇವೆ ಎಂದು ಫಿಲಿಬಿಟ್ ಪೊಲೀಸ್ ಸೂಪರಿಂಟೆಂಡೆಂಟ್ ತಿಳಿಸಿದರು. ಸಿಡಿಯ ದಾಖಲೆಗಳು ವರುಣ್ ಗಾಂಧಿ ಧ್ವನಿಯನ್ನು ಹೋಲುತ್ತದೆಂದು ಚಂಡೀಗಢ ಮ‌ೂಲದ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ.

ವರುಣ್ ವಿರುದ್ಧ ಕ್ರಿಮಿನಲ್ ಆರೋಪ ಇನ್ನೂ ರುಜುವಾತಾಗಿಲ್ಲ. ಏಕೆಂದರೆ ಅವರು ಫಿಲಿಬಿಟ್ ತನಿಖಾಧಿಕಾರಿಗೆ ಧ್ವನಿಯ ಮಾದರಿಯನ್ನು ನೀಡಲು ನಿರಾಕರಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಮುಂಚೆ ತಿಳಿಸಿದ್ದರು. ವರುಣ್ ಗಾಂಧಿ ವಿರುದ್ಧ ಚುನಾವಣೆ ಪ್ರಚಾರದಲ್ಲಿ ಕೋಮುಪ್ರಚೋದಕ ಭಾಷಣ ಮಾಡಿದ ಆರೋಪದ ಮೇಲೆ ಮ‌ೂರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾರದ ಮಳೆರಾಯ: ರೈತ ಸಮುದಾಯ ಕಂಗಾಲು
ರಾಜಧಾನಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ
ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಂಡ ಮುಸ್ಲಿಮರು
ಪ್ರತಿಮಾ-ಪ್ರಿಯೆ 'ಮಾಯೆ': ಬೊಕ್ಕಸಕ್ಕೆ ಕೋಟಿಕೋಟಿ ಹೊಡೆತ
ಜೀನ್ಸ್‌‌ಗೆ ನಿಷೇಧ ಬೇಡ: ಕಾಲೇಜಿಗೆ ಸರ್ಕಾರ
ವಿಜಯಕುಮಾರ್‌ಗೆ ದೆಹಲಿ ಪೊಲೀಸ್ ಮುಖ್ಯಸ್ಥರ ಪಟ್ಟ?