ಬಾಲಿವುಡ್ ಖ್ಯಾತಿ ನಟಿ ಐಶ್ವರ್ಯ ರೈ ಸೇರಿದಂತೆ ಹಲವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಅಕ್ರಮ ಭೂಮಿ ಖರೀದಿ ದೂರು ದಾಖಲಾಗಿದೆ.ನಟಿ ಐಶ್ವರ್ಯ ರೈ ಸೇರಿದಂತೆ ಸುಜ್ಲಾನ್ ಕಂಪೆನಿಯ ಅಧ್ಯಕ್ಷ ತುಳಸಿ ಬಾಯಿ ತಂತಿ ಉತ್ತರ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿದ್ದಾರೆ ಎಂದು ದೂರು ದಾಖಲಿಸಲಾಗಿದೆ.ಈ ಬಗ್ಗೆ ಕಳೆದ ರಾತ್ರಿ ಆನಂದ್ ಲಾಲಾ ಥಾಕರೆ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಖರೀದಿಸಿದ ಭೂಮಿಯನ್ನು ಅಕ್ರಮವಾಗಿ ಸುಜ್ಲಾನ್ ಕಂಪೆನಿ ಹೆಸರಿಗೆ ವರ್ಗಾಯಿಸಲಾಗಿದೆ. ಕಂಪೆನಿ ಈ ಜಾಗದಲ್ಲಿ ಗಾಳಿಯಿಂದ ವಿದ್ಯುತ್ ತಯಾರಿಸುವ ಘಟಕ ಆರಂಭಿಸಲಿದೆ.ಅಲ್ಲದೇ ಮಂಗಲ್ ಸರ್ಗೂನ್, ಮೋಹನ್ ಜವಾನ್, ಜಯಂತ್ ಬೋಸ್ಲೆ, ಅನಿಲ್ ಗಂಗವಾಣಿ ಸೇರಿದಂತೆ ಇತರರ ವಿರುದ್ಧ ಮೊಕದ್ದಮೆ ದಾಖಲಾಗಿದೆ. |