ಬಿಹಾರದ ಎಕ್ಸಿಕ್ಯೂಟಿವ್ ಎಂಜಿನಿಯರ್ ಹತ್ಯೆ ಆರೋಪಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗೃಹ ಇಲಾಖೆಗೆ ಆದೇಶಿಸಿದ್ದಾರೆ. ಎಂಜಿನಿಯರ್ ಹತ್ಯೆ ಆರೋಪ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಸುಮಾರು 20,000 ಎಂಜಿನಿಯರ್‌ಗಳು ಮುಷ್ಕರ ಹಮ್ಮಿಕೊಂಡಿದ್ದಾರೆ.
ಸಿಬಿಐ ಹತ್ಯೆ ಪ್ರಕರಣ ಕುರಿತು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಗೃಹಇಲಾಖೆಯ ಪ್ರಸ್ತಾವನೆಗೆ ನಿತೀಶ್ ಕುಮಾರ್ ಸಮ್ಮತಿಯ ಮುದ್ರೆ ಒತ್ತಿದ್ದಾರೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.ಕಲೆಕ್ಟೋರೇಟ್ ಕಟ್ಟಡದಿಂದ ಕೆಳಕ್ಕೆ ಬಿದ್ದು ಎಕ್ಸಿಕ್ಯೂಟಿವ್ ಎಂಜಿನಿಯರ್ ಯೋಗೇಂದ್ರ ಪಾಂಡೆ ಜೂ.18ರಂದು ಅಸುನೀಗಿದ್ದರು.
ಅವರ ಬಳಿ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿದ್ದರೂ ಅವರನ್ನು ಕಟ್ಟಡದಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಲಾಗಿದೆಯೆಂದು ಅವರ ಕುಟುಂಬ ವರ್ಗ ಆರೋಪಿಸಿದೆ. ಏತನ್ಮಧ್ಯೆ ಕೇಂದ್ರ ಸರ್ಕಾರವು ಎಂಜಿನಿಯರ್‌ಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ರಾಜ್ಯಸರ್ಕಾರಕ್ಕೆ ತಿಳಿಸಿದ್ದು, ಇಂತಹ ಘಟನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತೆಂದು ತಿಳಿಸಿದೆ. |