ಅನೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಸಕಾಲಕ್ಕೆ ಬರದೇ ರೈತರು ಕಂಗಾಲಾಗಿದ್ದು, ಬರಗಾಲದ ಕರಿನೆರಳು ಚಾಚಿರುವ ನಡುವೆ, ಮುಂಬೈನಲ್ಲಿ ಶುಕ್ರವಾರ ಭಾರೀ ಮಳೆ ಅಪ್ಪಳಿಸಿದೆ. ಕೇಂದ್ರ ಮುಂಬೈನ ಬೈಸುಲ್ಲಾ, ಪಾರೆಲ್, ಮಹಾಲಕ್ಷ್ಮಿ, ಮಹಿಮ್, ಗೋರೆಗಾವ್, ಮೈಲಾನ್ ಸಬ್‌ವೇನಲ್ಲಿ ಜಲಾವೃತವಾಗಿವೆ ಎಂದು ಗ್ರೇಟರ್ ಮುಂಬೈ ನಗರಸಭೆಯ ಅಧಿಕಾರಿ ತಿಳಿಸಿದರು.
ಪೂರ್ವ ಉಪನಗರಗಳ ಭಾಂಡುಪ್, ಕುರ್ಲಾ ಮತ್ತು ಮುಲುಂಡ್‌ನಲ್ಲಿ ಕೂಡ ಜಲಾವೃತವಾಗಿದೆ. ವಾಹನ ಸ್ಥಂಚಾರ ನಿಧಾನಗತಿಯಲ್ಲಿದ್ದು, ವಾಹನ ವೇಗವಾಗಿ ಚಲಿಸಿದರೆ ಅಪಘಾತಗಳುಂಟಾಗುವ ಸಾಧ್ಯತೆಯಿದೆಯೆನ್ನಲಾಗಿದೆ.
ಮಿನಿ ಟ್ಯಾಂಕರ್‌ವೊಂದು ವಿಲೆ ಪಾರ್ಲೆಯ ಪಶ್ಚಿಮ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮಗುಚಿಕೊಂಡಿದ್ದು ಯಾರೂ ಗಾಯಗೊಂಡಿಲ್ಲವೆಂದು ಅಧಿಕಾರಿ ಹೇಳಿದ್ದಾರೆ. ವರುಣನ ಆರ್ಭಟ ಮುಂದುವರಿದರೆ ನೀರು ವೇಗವಾಗಿ ಹರಿದುಹೋಗುವುದರ ಖಾತ್ರಿಗೆ ಎಂಸಿಜಿಎಂ ಸಜ್ಜಾಗಿರುವುದಾಗಿ ಅಧಿಕಾರಿ ತಿಳಿಸಿದರು. |