ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತ.ನಾ. ಸದನದಲ್ಲಿ ಚೈತನ್ಯ ಮೂಡಿಸಿದ ವಯಾಗ್ರ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತ.ನಾ. ಸದನದಲ್ಲಿ ಚೈತನ್ಯ ಮೂಡಿಸಿದ ವಯಾಗ್ರ!
ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಯೊಂದಕ್ಕೂ ಪರಸ್ಪರ ಕಚ್ಚಾಡುವ ಬದ್ಧ ವಿರೋಧಿ ಪಕ್ಷಗಳಾದ ಆಡಳಿತಾರೂಢ ಡಿಎಂಕೆ ಮತ್ತು ಪ್ರತಿಪಕ್ಷ ಎಐಎಡಿಎಂಕೆ ಸದಸ್ಯರು ಒಂದು ವಿಷಯದಲ್ಲಿ ಗುರುವಾರ ಅಪರೂಪದ ಒಗ್ಗಟ್ಟು ಪ್ರದರ್ಶಿಸಿದರು. ಈ ಎಂದಿಗೂ ಕಚ್ಚಾಡುವವರನು ಕೂಡಿಸಿ ಒಲಿಸಿದ ವಿಷಯ ಮತ್ತ್ಯಾವುದೂ ಅಲ್ಲ - ಒಂದು ಗಿಡಮೂಲಿಕೆ ವಯಾಗ್ರವನ್ನು ಇಡೀ ಸದನಕ್ಕೆ ಸ್ಯಾಂಪಲ್ ಆಗಿ ನೀಡಿದಾಗ!

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದು ಕಾಮೋತ್ತೇಜಕ 'ಲಬೂಬ್ ಸಗೀರ್' ಹೆಸರಿನ ಗಿಡಮೂಲಿಕೆ ವಯಾಗ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಒಂದು ವಾರದಲ್ಲಿ ಅದ್ಭುತ ಯಶಸ್ಸು ಗಳಿಸಿದೆ. ತಮಿಳುನಾಡು ಔಷಧೀಯ ಸಸ್ಯಗಳ ಫಾರಂ ಮತ್ತು ಗಿಡಮೂಲಿಕೆ ವೈದ್ಯಕೀಯ ಕಾರ್ಪೊರೇಶನ್ ಲಿ. (TAMPCOL) ಸಂಶೋಧಿಸಿರುವ ಈ ಕಾಮೋದ್ದೀಪನ ಲೇಹ್ಯವು ಡಿಎಂಕೆ-ಎಐಎಡಿಎಂಕೆ ಸದಸ್ಯರ ನಡುವೆ ಅಪರೂಪದ ಏಕತೆಗೆ ಕಾರಣವಾಯಿತು.

ಇದೆಲ್ಲ ಆರಂಭವಾಗಿದ್ದು ಆರೋಗ್ಯ ಸಚಿವ ಎಂ.ಆರ್.ಕೆ.ಪನೀರ್‌ಸೆಲ್ವಮ್ ಅವರು ತಮ್ಮ ಇಲಾಖೆಗೆ ಅನುದಾನ ನೀಡಬೇಕೆಂಬ ಕುರಿತಾಗಿ ನಡೆದ ಚರ್ಚೆಗೆ ಉತ್ತರಿಸುತ್ತಿರುವಾಗ. ಎಐಎಡಿಎಂಕೆ ಶಾಸಕ, ಮಾಜಿ ಸಚಿವ ಡಿ.ಜಯಕುಮಾರ್ ಅವರು, ಈ 'ಲಬೂಬ್ ಸಗೀರ್' ಎಷ್ಟು ಪರಿಣಾಮಕಾರಿಯಾಗಿದೆ ಎಂದು ಪ್ರಶ್ನಿಸಿದಾಗ ಇಡೀ ಸದನದಲ್ಲಿ ಮುಸಿ ಮುಸಿ ನಗು ಆರಂಭವಾಯಿತು.

ಇದಕ್ಕೆ ಸಚಿವರು ಉತ್ತರಿಸುವ ಮೊದಲೇ, ಅವರ ಸಂಪುಟ ಸಹೋದ್ಯೋಗಿ, ಪಿಡಬ್ಲ್ಯುಡಿ ಸಚಿವ ದುರೈ ಮುರುಗನ್ ಮಧ್ಯಪ್ರವೇಶಿಸಿ, "ಅದನ್ನು 'ನಿಜವಾಗಿಯೂ ಅಗತ್ಯವಿರುವವರಿಗೆ' ಮಾತ್ರವೇ ನೀಡಲಾಗುತ್ತದೆ" ಎಂದು ಹಾಸ್ಯಲೇಪನದೊಂದಿಗೆ ನುಡಿದರು. ಆಗ ಮಾತನಾಡಿದ ಪನೀರ್‌ಸೆಲ್ವಂ, ಈ ಮಾತ್ರೆಯ ಪರಿಣಾಮವೆಷ್ಟೆಂಬುದನ್ನು ತಿಳಿದುಕೊಳ್ಳಿ ಎಂದು ಜಯಕುಮಾರ್ ಅವರಿಗೇ ಹೇಳಿದರಲ್ಲದೆ, ವಾರಕ್ಕೊಂದು ಡೋಸ್ ತೆಗೆದುಕೊಳ್ಳಿ, ನಂತರ ನಿಮ್ಮ ಅಭಿಪ್ರಾಯ ಹೇಳಿ ಎಂದು ಪ್ರಿಸ್ಕ್ರೈಬ್ ಮಾಡಿದಾಗ, ಇಡೀ ಸದನ ನಗೆಗಡಲಲ್ಲಿ ತೇಲಿತು.

ಅಂತೆಯೇ ಸದನದ ಎಲ್ಲ ಸದಸ್ಯರಿಗೆ ಈ ಔಷಧಿಯುಳ್ಳ ಕಿಟ್ ವಿತರಿಸಲಾಯಿತು. ಈ ಕಾಮೋತ್ತೇಜಕ ಗಿಡಮೂಲಿಕೆ ಔಷಧಿಯನ್ನು ಯುನಾನಿ ಸೂತ್ರವೊಂದರ ಅನುಸಾರ ತಯಾರಿಸಲಾಗಿದ್ದು, ಟಿಎಎಂಪಿಸಿಒಲ್ ಇತ್ತೀಚೆಗೆ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಹೀಗಾಗಿ ಇದು ದುಬಾರಿಯಾಗಿರುವ 'ವಯಾಗ್ರ' ಎಂಬ ವಿಶ್ವವಿಖ್ಯಾತ ಕಾಮೋದ್ದೀಪನ ಔಷಧಿಗೆ ಪರ್ಯಾಯ ಎಂದು ಪರಿಗಣಿಸಲಾಗಿದೆ.

ಇತ್ತೀಚಿನ ಮಾಹಿತಿಗಳ ಅನುಸಾರ, ಟಿಎಎಂಪಿಸಿಒಲ್ ಈಗಾಗಲೇ 16 ಟನ್ ಲಬೂಬ್ ಸಗೀರ್ ಅನ್ನು ಮಾರಾಟ ಮಾಡಿದ್ದು, ಇದರ ಬೆಲೆ 100 ಗ್ರಾಂಗೆ ಕೇವಲ 28 ರೂಪಾಯಿ. ಲೇಹ್ಯದ ರೂಪದಲ್ಲಿರುವ ಈ ಔಷಧಿಯು ಕಾಮಾಸಕ್ತಿಯನ್ನು ಕೆರಳಿಸುತ್ತದೆ ಮತ್ತು ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಹಾಗೂ ಸಾಮಾನ್ಯ ಟಾನಿಕ್ ಆಗಿಯೂ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬರಗಾಲದ ಬೇಗೆ ನಡುವೆ ಮುಂಬೈನಲ್ಲಿ ಮಳೆಯ ಸಿಂಚನ
ಒಂದು ವಿಷಯದಲ್ಲಿ ಫೇಲ್ ಆದ್ರೂ ತೇರ್ಗಡೆ!
ಮಾಯಾ ಕರಾಮತ್ತು;ತರಾತುರಿಯಲ್ಲಿ ಪ್ರತಿಮೆ ಅನಾವರಣ
ಚಿದಂಬರಂ ಆಯ್ಕೆ ಸಿಂಧುವಲ್ಲ: ಹೈಕೋರ್ಟ್‌ಗೆ ದೂರು
ಅಮರನಾಥ ಯಾತ್ರೆ ಪುನರಾರಂಭ
ಅಸ್ಸಾಂ ರಾಜ್ಯಪಾಲ ಶಿವಚರಣ್ ನಿಧನ