ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 10ನೇ ತರಗತಿ: ಗುಜರಾತ್ ಸ್ವಾಗತ, ಎಡಕ್ಕೆ ಪಿತೂರಿ ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
10ನೇ ತರಗತಿ: ಗುಜರಾತ್ ಸ್ವಾಗತ, ಎಡಕ್ಕೆ ಪಿತೂರಿ ಶಂಕೆ
ಕೇಂದ್ರ ಸಚಿವ ಕಪಿಲ್ ಸಿಬಲ್ ಅವರ ಶಿಕ್ಷಣ ಸುಧಾರಣೆ ಪ್ರಸ್ತಾವನೆಗಳಿಗೆ ವಿವಿಧ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. 10ನೇ ತರಗತಿ ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿ ಅದರ ಬದಲಿಗೆ ಪರ್ಯಾಯ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತರುವ ಸಿಬಲ್ ಪ್ರಸ್ತಾವನೆಗೆ ಗುಜರಾತಿನ ಬಿಜೆಪಿ ಸರ್ಕಾರ ಸಾರ್ವಜನಿಕವಾಗಿ ಸ್ವಾಗತಿಸಿದೆ. ಆದರೆ ಎಡರಂಗದ ಆಡಳಿತದ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಕೇರಳ ಮಾತ್ರ ಸಿಬಲ್ ಕಲ್ಪನೆಗೆ ಖ್ಯಾತೆ ತೆಗೆದಿವೆ.

ಶಿಕ್ಷಣದ ವಿಪರೀತ ಕೇಂದ್ರೀಕರಣ ಮತ್ತು ಖಾಸಗೀಕರಣಕ್ಕೆ ಪಿತೂರಿಯೆಂದೂ, ಒಕ್ಕೂಟ ರಚನೆಗೆ ತೊಂದರೆಯೆಂದೂ ಅವು ಭಾವಿಸಿವೆ. ಉತ್ತರಪ್ರದೇಶ ಸರ್ಕಾರ ಮಾತ್ರ ಸಿಬಲ್ ವಾದವನ್ನು ಒಪ್ಪಿಕೊಂಡಿಲ್ಲ. ವಿದ್ಯಾರ್ಥಿಗಳ ಹೊರೆ ತಗ್ಗಿಸಲು ಸ್ವತಃ ಸುಧಾರಣೆಗಳ ಕಂತನ್ನು ಜಾರಿಗೆ ತಂದು 10ನೇ ತರಗತಿ ಪರೀಕ್ಷೆಯ ಪಾವಿತ್ರ್ಯತೆ ಉಳಿಸಿಕೊಂಡಿದೆ. 10ತರಗತಿ ಮಂಡಳಿ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಮಾಡುವ ನಿರ್ಧಾರ ಕೈಗೊಂಡರೆ ಅದನ್ನು ಪಾಲಿಸಲು ಗುಜರಾತ್ ಸರ್ಕಾರ ಮಾತ್ರ ತುದಿಗಾಲಲ್ಲಿ ನಿಂತಿದೆ.

ಕೇಂದ್ರಸರ್ಕಾರದ ನಿರ್ಧಾರವನ್ನು ಪಾಲಿಸುವುದಾಗಿ ರಾಜ್ಯ ಶಿಕ್ಷಣ ಸಚಿವ ರಮನ್‌ಲಾಲ್ ವೋರಾ ಭರವಸೆ ನೀಡಿದ್ದಾರೆ. ವಾಸ್ತವ ಸಂಗತಿಯೇನೆಂದರೆ ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ನಾವೀನ್ಯತೆ ತರಲು ಗುಜರಾತ್ ಸರ್ಕಾರ ಸ್ಥಾಪಿಸಿದ್ದ ಸಮಿತಿಯೊಂದು ಮಂಡಳಿ ಪರೀಕ್ಷೆ ರದ್ದುಮಾಡಬೇಕೆಂದು ಸಲಹೆ ಮಾಡಿತ್ತೆಂದು ಆರೋಗ್ಯ ಸಚಿವ ಜಯ್ ನಾರಾಯಣ್ ವ್ಯಾಸ್ ತಿಳಿಸಿದರು.

ಇದಕ್ಕೆ ತದ್ವಿರುದ್ಧವಾಗಿ ಪಶ್ಚಿಮಬಂಗಾಳದ ಸಿಪಿಎಂ ಎಡರಂಗ ಸರ್ಕಾರ ಈ ಕಲ್ಪನೆಗೆ ಕಿಡಿಕಾರಿದೆ. ಶಿಕ್ಷಣವನ್ನು ಖಾಸಗೀಕರಣ ಮತ್ತು ವಿಪರೀತ ಕೇಂದ್ರೀಕರಣ ಮಾಡುವ ಪ್ರಯತ್ನಕ್ಕೆ ಎಡಪಕ್ಷ ಒಪ್ಪುವುದಿಲ್ಲವೆಂದು ತಿಳಿಸಿದೆ. ಉತ್ತರ ಪ್ರದೇಶದ ಶಿಕ್ಷಣ ಸಚಿವ ರಂಗನಾಥ್ ಮಿಶ್ರ ಸಿಬಲ್ ಸಲಹೆಯನ್ನು ಟೀಕಿಸಿದ್ದಾರೆ.

ವಿದ್ಯಾರ್ಥಿಗಳು ಮನಸ್ಸಿನಲ್ಲಿ ಗುರಿ ಇಟ್ಟುಕೊಂಡು ಓದುತ್ತಾರೆ. ಮಂಡಳಿ ಪರೀಕ್ಷೆಯಿಲ್ಲದಿದ್ದರೆ ಶಿಕ್ಷಣವನ್ನು ಹಗುರವಾಗಿ ಕಾಣುತ್ತಾರೆ. ಪರೀಕ್ಷೆಯಿಲ್ಲದೇ ಶಿಕ್ಷಣ ಎಂತಹುದು ಎಂದು ಪ್ರಶ್ನಿಸಿದ್ದಾರೆ. ತಮ್ಮ ಸರ್ಕಾರವು ಈಗಾಗಲೇ ಗ್ರೇಡ್ ಮತ್ತು ಕ್ರೆಡಿಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳ ಮೇಲೆ ಹೊರೆ ತಗ್ಗಿಸುತ್ತದೆಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಂಧಮಾಲ್-ಚರ್ಚ್ ನಿರ್ಮಿಸಿ ಹೊಸ ಜೀವನ ಆರಂಭಿಸಿ: ಚಿದು
ತ.ನಾ. ಸದನದಲ್ಲಿ ಚೈತನ್ಯ ಮೂಡಿಸಿದ ವಯಾಗ್ರ!
ಬರಗಾಲದ ಬೇಗೆ ನಡುವೆ ಮುಂಬೈನಲ್ಲಿ ಮಳೆಯ ಸಿಂಚನ
ಒಂದು ವಿಷಯದಲ್ಲಿ ಫೇಲ್ ಆದ್ರೂ ತೇರ್ಗಡೆ!
ಮಾಯಾ ಕರಾಮತ್ತು;ತರಾತುರಿಯಲ್ಲಿ ಪ್ರತಿಮೆ ಅನಾವರಣ
ಚಿದಂಬರಂ ಆಯ್ಕೆ ಸಿಂಧುವಲ್ಲ: ಹೈಕೋರ್ಟ್‌ಗೆ ದೂರು