' ನೀವು ಅಪರಾಧಿಯನ್ನು ಹೆಕ್ಕಿ ತೆಗೆದು ಗಲ್ಲಿಗೇರಿಸುವುದು ಸಾಧ್ಯವಿಲ್ಲ. ಏಕೆಂದರೆ ಸುದೀರ್ಘ ಕಾಲದಿಂದ ಕ್ಷಮಾದಾನ ಅರ್ಜಿಗಳು ಬಾಕಿವುಳಿದಿವೆ 'ಎಂದು ಕಾನೂನು ಮತ್ತು ನ್ಯಾಯಸಚಿವ ಎಂ.ವೀರಪ್ಪ ಮೊಯ್ಲಿ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.ಸಂಸತ್ ದಾಳಿ ಪ್ರಕರಣದ ಆರೋಪಿ ಅಫ್ಜಲ್ ಗುರು ಮರಣದಂಡನೆ ವಿಳಂಬವಾಗುತ್ತಿದೆಯೆಂಬ ಕೂಗಿಗೆ ಪ್ರತಿಕ್ರಿಯಿಸಿದ ಮೊಯ್ಲಿ ಮೇಲಿನ ಉತ್ತರ ಕೊಟ್ಟಿದ್ದಾರೆ. ಸಂಸತ್ ದಾಳಿಯ ಕುರಿತ ತಪ್ಪಿತಸ್ಥ ಅಫ್ಜಲ್ ಗುರುವನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಪ್ರತಿಪಕ್ಷ ಆಗ್ರಹಿಸುತ್ತಿದೆ.ಕಾನೂನಿನ ಆಡಳಿತವಿರುವ ಯಾವುದೇ ರಾಷ್ಟ್ರವು ಯಾವುದೇ ರಾಜಕೀಯ ಪಕ್ಷದ ವಿವೇಚನೆ ಮೇಲೆ ಅಪರಾಧಿಯನ್ನು ಗಲ್ಲಿಗೇರಿಸುವುದಿಲ್ಲ ಎಂದು ಹೇಳಿದ ಮೊಯ್ಲಿ, ಕ್ಷಮಾದಾನ ಅರ್ಜಿಗಳ ಶೀಘ್ರ ವಿಲೇವಾರಿಗೆ ವ್ಯವಸ್ಥೆಯೊಂದನ್ನು ರೂಪಿಸುವುದು ಅಗತ್ಯವಾಗಿದೆ ಎಂದು ನುಡಿದಿದ್ದಾರೆ. ಸುಮಾರು 28 ಕ್ಷಮಾದಾನ ಕೋರಿಕೆಯ ಅರ್ಜಿಗಳು ವಿಲೇವಾರಿಗಾಗಿ ಸುದೀರ್ಘಕಾಲದಿಂದ ಬಾಕಿವುಳಿದಿದೆ. |