ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತಂದೆಯೇ ನನಗೆ ಆದರ್ಶ: ವೀರಪ್ಪನ್ ಪುತ್ರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಂದೆಯೇ ನನಗೆ ಆದರ್ಶ: ವೀರಪ್ಪನ್ ಪುತ್ರಿ
ಮುಂದೆ ಐಎಎಸ್ ಅಧಿಕಾರಿಯಾಗುವ ಆಸೆ...
ಸುಮಾರು ಎರಡು ದಶಕಗಳ ಕಾಲ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ಸಿಂಹಸ್ವಪ್ನನಾಗಿದ್ದ ದಂತಚೋರ ವೀರಪ್ಪನ್ ಪುತ್ರಿ ವಿದ್ಯಾ ತಾನು ಐಎಎಸ್ ಅಧಿಕಾರಿಯಾಗುವ ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದು, ತನಗೆ ತನ್ನ ತಂದೆಯೇ ಆದರ್ಶ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ.

ಸಂದರ್ಶನದಲ್ಲಿ ವಿದ್ಯಾ ಕೆಲವು ಮಹತ್ವದ ಅಂಶಗಳನ್ನು ಬಿಚ್ಚಿಟ್ಟಿದ್ದಾಳೆ. ತಾನು ಅಪ್ಪನನ್ನು ಮೊದಲ ಸಲ ನೋಡಿದ್ದು ಮೂರು ವರ್ಷದವಳಾಗಿದ್ದಾಗ. ಆತನ ಮೀಸೆ ನೋಡಿ ನಾನು ಇವ ಯಾರೋ ಪೊಲೀಸ್ ಅಧಿಕಾರಿ ಇರಬೇಕು ಎಂದುಕೊಂಡಿದ್ದೆ. ಏಕೆಂದರೆ ನಾನು ನಮ್ಮ ಊರಿನಲ್ಲಿ ಅಂತಹ ಪೊಲೀಸರನ್ನು ನೋಡುತ್ತಲೇ ಬೆಳೆದವಳು. ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ಅಪ್ಪ ಆಟವಾಡಿಸಿದ್ದರು. ಅಲ್ಲಿಯವರೆಗೂ ನನಗೆ ತಾಯಿ ಯಾರೊಂತ ಗೊತ್ತಿರಲಿಲ್ಲ. ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದೆ. ಒಮ್ಮೆ ಅಜ್ಜಿ ನನಗೆ ತಾಯಿಯನ್ನು ತೋರಿಸಲು ಜೈಲಿಗೆ ಕರೆದೊಯ್ದಿದ್ದರು. ಅಲ್ಲಿ ನೋಡು ನಿಮ್ಮ ತಾಯಿ ಎಂದ ಕೂಡಲೇ ನಾನು ಅಲ್ಲಿಂದ ಓಡಿಹೋಗಿದ್ದೆ ಎಂದು ಹಿಂದಿನ ನೆನಪನ್ನು ಹೇಳಿಕೊಂಡಿದ್ದಾಳೆ.

ಅಪ್ಪ ಸತ್ತಾಗ ನನಗೆ 14ವರ್ಷ. ಆಗ ನಾನು 8ನೇ ತರಗತಿಯಲ್ಲಿದ್ದೆ. ಒಂದು ದಿನ ನಮ್ಮ ಸಂಬಂಧಿಕರು ಶಾಲೆಗೆ ಬಂದು ನಿಮ್ಮ ತಂದೆ ತೀರಿ ಹೋದರು ಎಂದರು. ಈ ಘಟನೆ ನಡೆಯುವುದಕ್ಕೂ ಹಿಂದಿನ ತಿಂಗಳುಗಳಲ್ಲಿ ನಾನು ಆತಂಕದಿಂದ ಇದ್ದೆ. ಅದಕ್ಕೆ ಕಾರಣ ನನ್ನ ತಾಯಿ ಮುತ್ತುಲಕ್ಷ್ಮಿ ತಿಳಿಸಿದ್ದ ಒಂದು ವಿಷಯ. ನಾನು ಜ್ಯೋತಿಷಿ ಬಳಿ ಹೋಗಿದ್ದೆ. ಕಳೆದ ಎರಡು ವರ್ಷಗಳಿಂದ ನಮ್ಮ ಕುಟುಂಬದವರು ಸಾಯುತ್ತಲೇ ಇದ್ದಾರೆ. ಈ ವರ್ಷವೂ ಅಷ್ಟೇ, ನಮ್ಮಲ್ಲಿ ಯಾರಾದರು ಸಾಯುತ್ತೇವೆ ಎಂದು ಹೇಳಿದ್ದಾರೆ ಎಂದು ಅಮ್ಮ ಹೇಳಿದ್ದರು. ಅದು ಹಾಗೆಯೇ ನಡೆದಿತ್ತು.

ಪೊಲೀಸರ ಹಲವು ಕಿರುಕುಳಗಳನ್ನು ನೋಡು ನೋಡಿದ್ದೇನೆ. ನಮ್ಮ ಊರಿಗೆ ಬರುತ್ತಿದ್ದ ಬಸ್ಸನ್ನು ಅಡ್ಡಗಟ್ಟಿ ಪೊಲೀಸರು ಸುಲಿಗೆ ಮಾಡುತ್ತಿದ್ದರು. ನಾನು ದೊಡ್ಡವಳಾದ ಮೇಲೆ ಅದನ್ನು ತಡೆಯಬೇಕು ಎಂದು ಆಗಲೇ ಕನಸು ಕಂಡಿದ್ದೆ. ಅಲ್ಲದೆ ನನಗೆ ನನ್ನ ತಂದೆಯೇ ದೊಡ್ಡ ಆದರ್ಶ ಎಂದು ವಿದ್ಯಾ ಹೇಳಿಕೊಂಡಿದ್ದಾಳೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತೆ ನಾಲ್ವರಿಗೆ ಎಚ್‌1ಎನ್‌1 ಸೋಂಕು ಶಂಕೆ
ಕಳ್ಳಭಟ್ಟಿ: ಏಳು ಸಾವು
ಅಫ್ಜಲ್‌ನ ಹೆಕ್ಕಿ ತೆಗೆದು ಗಲ್ಲಿಗೇರಿಸಲು ಸಾಧ್ಯವಿಲ್ಲ: ಮೊಯ್ಲಿ
ರ‌್ಯಾಗಿಂಗ್ ನಿವಾರಿಸಿ: ರಾಜ್ಯಪಾಲರಿಗೆ ರಾಷ್ಟ್ರಪತಿ ಪತ್ರ
ಮಾಯಾ ಪ್ರತಿಮೆ ಮೇಲೆ ಬುಲ್‌ಡೋಜರ್: ಎಸ್ಪಿ ಎಚ್ಚರಿಕೆ
10ನೇ ತರಗತಿ: ಗುಜರಾತ್ ಸ್ವಾಗತ, ಎಡಕ್ಕೆ ಪಿತೂರಿ ಶಂಕೆ