ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉತ್ತರಾಖಂಡ್ ಸಿಎಂ ಆಗಿ ಪೋಖ್ರಿಯಾಲ್ ಪ್ರಮಾಣವಚನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರಾಖಂಡ್ ಸಿಎಂ ಆಗಿ ಪೋಖ್ರಿಯಾಲ್ ಪ್ರಮಾಣವಚನ
ಬಿಜೆಪಿ ನೇತೃತ್ವದ ಉತ್ತರಾಖಂಡ್ ಸರ್ಕಾರದ 5ನೇ ಮುಖ್ಯಮಂತ್ರಿಯಾಗಿ ರಮೇಶ್ ಪೋಖ್ರಿಯಾಲ್ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಇಲ್ಲಿಯ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರಾಖಂಡ್ ರಾಜ್ಯಪಾಲ ಬಿ.ಎಲ್.ಜೋಷಿ ಅವರು ಪೋಖ್ರಿಯಾಲ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭದಲ್ಲಿ, ಶಾಸಕರಾದ ಮತ್ಬಾರ್ ಸಿಂಗ್ ಕಂಡೂರಿ, ಬಿಷನ್ ಸಿಂಗ್ ಚೂಫಾಲ್ ಮತ್ತು ಮದನ್ ಕೌಶಿಕ್ ಅವರೆಲ್ಲರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂವರು ಶಾಸಕರು ಹಿಂದಿನ ಖಂಡೂರಿ ಸರ್ಕಾರದಲ್ಲಿಯೂ ಸಂಪುಟ ದರ್ಜೆಯ ಸಚಿವರಾಗಿದ್ದರು.

ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಯೋಗ ಗುರು ಬಾಬಾ ರಾಮದೇವ್, ಪರಮಾರ್ಥ ನಿಕೇತನ್ ಆಶ್ರಮದ ಚಿದಾನಂದ ಮುನಿ ಉಪಸ್ಥಿತರಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಲ್ ಪೇಮೆಂಟ್ ಇಲ್ಲ: ಗಯಾನ ತಂಡ ಆಸ್ಪತ್ರೆಯಲ್ಲಿ ಬಂದಿ
ಭಾರತದ ಅನ್ನ ತಿಂದು ಪಾಕ್ ಪರ ಬೇಹುಗಾರಿಕೆ: 2 ಸೆರೆ
ನ್ಯಾಯಮೂರ್ತಿಗಳ ಆಸ್ತಿಬಹಿರಂಗಕ್ಕೆ ನೂತನ ಮಸೂದೆ: ಮೊಯ್ಲಿ
ಉಲ್ಟಾ ಹೊಡೆದ ಮಹಿಳೆ: ಪೊಲೀಸರು ಅತ್ಯಾಚಾರ ನಡೆಸಿಲ್ಲ
ಗ್ರಾಮೀಣ ಸೇವೆ ಸಲ್ಲಿಸುವ ವೈದ್ಯರಿಗೆ ಬಂಪರ್ ಕೊಡುಗೆ
ತಂದೆಯೇ ನನಗೆ ಆದರ್ಶ: ವೀರಪ್ಪನ್ ಪುತ್ರಿ