ಬಿರುಬೇಸಿಗೆಯ ಬಿಸಿಲಿನಲ್ಲಿ ವಿದ್ಯುತ್ ಬೇಡಿಕೆ ಗಗನಕ್ಕೇರುತ್ತಿದೆ. ಮಳೆಯಿರಲಿ, ಬರಗಾಲವಿರಲಿ, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಲು ಪಂಜಾಬ್ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಗೆ ನಿಷೇಧ ಹೇರಿದೆ. ರೈತರು ಕಷ್ಟಕ್ಕೀಡಾಗದಂತೆ ವಿದ್ಯುತ್ ಉಳಿಸುವ ಹೊಸ ವಿಧಾನವನ್ನು ಪಂಜಾಬ್ ಸರ್ಕಾರ ಈ ಮೂಲಕ ಕಂಡುಕೊಂಡಿದೆ.
ಆಧುನಿಕ ಮತ್ತು ಬೃಹತ್ ಕಟ್ಟಡದ ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡವನ್ನು ಹವಾನಿಯಂತ್ರಣ ವ್ಯವಸ್ಥೆ ಆಧಾರದ ಮೇಲೆ ರೂಪಿಸಲಾಗಿದ್ದರೂ ಈಗ ಹವೆಯ ಸುಳಿವೇ ಇಲ್ಲ.ಮೊಹಾಲಿಯಲ್ಲಿ ಉಷ್ಣಾಂಶ 44 ಡಿಗ್ರಿ ಸೆಂಟಿಗ್ರೇಡ್‌ಗೆ ಮುಟ್ಟಿದೆ. ಆದರೆ ಕಟ್ಟಡದೊಳಗೆ ಮಾತ್ರ ಬೇಸಿಗೆಯ ಬಿಸಿಯಿಂದ ಬೆವರಿನ ಸ್ನಾನವಾಗುತ್ತಿದೆ. ಇದು ನಿಜಕ್ಕೂ ಕ್ರೂರ ವ್ಯವಸ್ಥೆ ಎಂದು ನೌಕರರು ಹೇಳುತ್ತಾರೆ.
ಕಟ್ಟಡದೊಳಗೆ ಸೂರ್ಯನ ಕಿರಣ ನೇರವಾಗಿ ಬೀಳುತ್ತಿದೆ. ಕೆಲವು ಬಾರಿ ಜನರಿಂದ ತುಂಬಿಹೋಗಿ ಅಸಹನೀಯವಾಗುತ್ತದೆ. ಕಿಟಕಿಗಳು ಮುಚ್ಚಿದ್ದಾಗ ಏರ್ ಕಂಡೀಷನರ್ ಕಾರ್ಯನಿರ್ವಹಿಸದಿದ್ದರೆ ದೊಡ್ಡ ಸಮಸ್ಯೆಯಾಗುತ್ತದೆಂದು ನೌಕರ ಮೊಹಿಂದರ್ ಪಾಲ್ ಸಿಂಗ್ ಉದ್ಗಾರ. ಇದು ಕೆಲಸದ ದಕ್ಷತೆ ಮೇಲೆಯೂ ಪರಿಣಾಮ ಬೀರುತ್ತದೆಂದು ಅವರು ಹೇಳುತ್ತಾರೆ.ಆದರೆ ಸರ್ಕಾರ ಮಾತ್ರ ಜೂ.30ರವರೆಗೆ ಯಾವುದೇ ಹವಾನಿಯಂತ್ರಕವಿಲ್ಲವೆಂದು ಖಡಾಖಂಡಿತವಾಗಿ ಹೇಳಿದೆ. |