ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಿಲ್ಲದ ಜನಾಂಗೀಯ ಹಲ್ಲೆ: ಸುಪ್ರೀಂ ಕೇಂದ್ರಕ್ಕೆ ತರಾಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಲ್ಲದ ಜನಾಂಗೀಯ ಹಲ್ಲೆ: ಸುಪ್ರೀಂ ಕೇಂದ್ರಕ್ಕೆ ತರಾಟೆ
ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಹೊಣೆ ಭಾರತದ್ದು...
PTI
ಆಸ್ಟ್ರೇಲಿಯಾದಲ್ಲಿ ಜನಾಂಗೀಯ ಹಲ್ಲೆಗೊಳಗಾಗುತ್ತಿರುವ ವಿದ್ಯಾರ್ಥಿಗಳ ರಕ್ಷಣೆ ಭಾರತ ಸರ್ಕಾರದ ಹೊಣೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಯಲು ಅದಕ್ಕೆ ಸಾಧ್ಯವಾಗಿಲ್ಲ ಎಂದಿರುವ ಸುಪ್ರೀಂಕೋರ್ಟ್, ಆ ನಿಟ್ಟಿನಲ್ಲಿ ನಾವು 'ಆ ಸಮಸ್ಯೆಯನ್ನು ಮುಚ್ಚಿಹಾಕಲು ಯತ್ನಿಸಬಾರದು' ಎಂದು ಸೋಮವಾರ ಸರ್ಕಾರಕ್ಕೆ ಹೇಳಿದೆ.

'ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ತುಂಬಾ ಮುಖ್ಯವಾದದ್ದು ಎಂದು ಸರ್ವೋಚ್ಛನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಪ್ರೀಂನ ತರಾಟೆಗೆ ಪ್ರತಿಕ್ರಿಯೆ ನೀಡಿ, ಕೇಂದ್ರದ ಆಟಾರ್ನಿ ಜನರಲ್ ಜಿ.ಇ.ವಾಹನ್‌ವತಿ, ಭಾರತೀಯರ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆ ಘಟನೆ ಮತ್ತು ಹಲ್ಲೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಆಸ್ಟ್ರೇಲಿಯಾ ಸರ್ಕಾರ ಭಾರತಕ್ಕೆ ಭರವಸೆ ನೀಡಿರುವುದಾಗಿ ತಿಳಿಸಿದರು.

ಅಲ್ಲದೇ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆಯುತ್ತಿದ್ದು,ಆ ಬಗ್ಗೆ ಕೇಂದ್ರ ಸರ್ಕಾರ ಏನೇನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಎರಡು ವಾರಗಳೊಳಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದೆ.

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ಮುಂದುವರಿದ್ದು, ಕೇಂದ್ರ ವಿದೇಶಾಂಗ ಮಂತ್ರಿ ಎಸ್.ಎಂ.ಕೃಷ್ಣ ಅವರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯದಂತೆ ಆಸ್ಟ್ರೇಲಿಯಾ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿಕೆ ನೀಡುತ್ತಿದ್ದರೂ ಕೂಡ ಹಲ್ಲೆ ಮಾತ್ರ ಮುಂದುವರಿದಿದೆ. ಇದರಿಂದಾಗಿ ಭಾರತದಲ್ಲಿರುವ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಸುಪ್ರೀಂಕೋರ್ಟ್ ಕೂಡ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಡಿಯಲ್ಲಿ ಗುಂಡಿನ ಕಾಳಗ: ಪಾಕ್ ದಾಳಿಗೆ ಸೈನಿಕ ಬಲಿ
ಹಲ್ಲೆ ಪ್ರಕರಣ: ರಾಜ್ ಠಾಕ್ರೆ ಕಲ್ಯಾಣ್ ಕೋರ್ಟ್‌ಗೆ ಶರಣು
ಸಮುದ್ರ ಮೇಲ್ಸೇತುವೆ ಜೂನ್ 30ರಂದು ಉದ್ಘಾಟನೆ
ಸಲಿಂಗರತಿ ಸಕ್ರಮಕ್ಕೆ ಧಾರ್ಮಿಕ ನಾಯಕರು ಕಿಡಿ
ಹಂದಿಜ್ವರ ಪೀಡಿತರ ಸಂಖ್ಯೆ 95
ಶಿವರಾಜ್ ಪಾಟೀಲ್‌ಗೆ ರಾಜ್ಯಪಾಲ ಹುದ್ದೆ?