ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಷ್ಟ್ರಪತಿ, ಪಿಎಂ, ಸಂಸತ್ ವಿದ್ಯುತ್ ವೆಚ್ಚ 14 ಕೋಟಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಪತಿ, ಪಿಎಂ, ಸಂಸತ್ ವಿದ್ಯುತ್ ವೆಚ್ಚ 14 ಕೋಟಿ!
ದೇಶದಲ್ಲಿ ಮಳೆ ಕಡಿಮೆಯಾಗಿ ವಿದ್ಯುತ್ ಬಗ್ಗೆ ಹಾಹಾಕಾರ ಎದ್ದಿರುವಂತೆಯೇ ಇಲ್ಲೊಂದು ವರದಿಯಿದೆ. ದೇಶದ ಪ್ರಧಾನ ಶಕ್ತಿ ಕೇಂದ್ರಗಳಾದ ರಾಷ್ಟ್ರಪತಿ ಭವನ, ಸಂಸತ್ತು ಮತ್ತು ಪ್ರಧಾನಮಂತ್ರಿ ಅಧಿಕೃತ ನಿವಾಸಗಳಿಗೆ ನಿರಂತರ ಚಾಲೂ ಸ್ಥಿತಿಯಲ್ಲಿರಲು ಅಷ್ಟೇ 'ಶಕ್ತಿ'ಯೂ ಬೇಕಿದೆ. ಅಂದರೆ ಇಲ್ಲಿ ವರ್ಷಕ್ಕೆ 14 ಕೋಟಿ ರೂಪಾಯಿಗಳ ವಿದ್ಯುತ್ ಬಳಕೆಯಾಗಿದೆ!

2008ರಲ್ಲಿ ಸಂಸತ್ತಿನ ವಿದ್ಯುತ್ ಬಿಲ್‌ನ ಮೊತ್ತ 6.25 ಕೋಟಿ ರೂಪಾಯಿ. ರಾಷ್ಟ್ರಪತಿ ಭವನಕ್ಕೆ 6.70 ಕೋಟಿ ಮತ್ತು ಪ್ರಧಾನಮಂತ್ರಿ ಅಧಿಕೃತ ನಿವಾಸಕ್ಕೆ 50.35 ಲಕ್ಷ ರೂ. ಮೊತ್ತದ ವಿದ್ಯುತ್ ಬಳಕೆಯಾಗಿದೆ ಎಂದು ಆರ್‌ಟಿಐ ವಿಚಾರಣೆಗೆ ದೊರೆತ ಉತ್ತರದಲ್ಲಿ ಮಾಹಿತಿ ಲಭ್ಯವಾಗಿದೆ.

ಅಚ್ಚರಿಯ ಸಂಗತಿಯೆಂದರೆ, ರಾಷ್ಟ್ರಪತಿ ಭವನ ಮತ್ತು ಪ್ರಧಾನಮಂತ್ರಿ ಕಚೇರಿಗೆ ಕಳೆದ ಮೂರು ವರ್ಷಗಳಲ್ಲೇ ಅತ್ಯಧಿಕ ವಿದ್ಯುತ್ ವ್ಯಯವಾಗಿರುವುದು ಕಳೆದ ವರ್ಷ.

ಅಂದರೆ ಕಳೆದ ವರ್ಷವೊಂದರಲ್ಲಿಯೇ ಕಳೆದ ಮೂರೂ ವರ್ಷಗಳ ವಿದ್ಯುತ್ ಬಳಕೆಯ ಒಟ್ಟು ಪ್ರಮಾಣದ ಅರ್ಧದಷ್ಟು ಶಕ್ತಿ ವ್ಯಯವಾಗಿದೆ ಎಂದು ಮುಂಬೈ ಮೂಲಕ ಆರ್‌ಟಿಐ ಅರ್ಜಿದಾರ ಚೇತನ್ ಕೊಠಾರಿ ತಿಳಿಸಿದ್ದಾರೆ.

ಪ್ರಧಾನಿ ನಿವಾಸದ ವಾರ್ಷಿಕ ವಿದ್ಯುತ್ ಬಿಲ್ 2005ರಲ್ಲಿ 7.48 ಲಕ್ಷ ರೂ, 2006ರಲ್ಲಿ 15.16 ಲಕ್ಷ ರೂ., 2007ರಲ್ಲಿ 12.39 ಲಕ್ಷ ರೂ. ಹಾಗೂ 2008ರಲ್ಲಿ 50.35 ಲಕ್ಷ ರೂ.

ಅದೇ ರೀತಿ ರಾಷ್ಟ್ರಪತಿ ಭವನದ ವಿದ್ಯುತ್ ಬಿಲ್, 2005ರಲ್ಲಿ 3.20 ಕೋಟಿ ರೂ., 2006ರಲ್ಲಿ 4 ಕೋಟಿ ರೂ., 2007ರಲ್ಲಿ 4.34 ಕೋಟಿ ರೂ. ಮತ್ತು 2008ರಲ್ಲಿ 6 ಕೋಟಿ ರೂ.

ಈ ಮೂರೂ ಸ್ಥಳಗಳಲ್ಲಿ ವಾರ್ಷಿಕ ಎಷ್ಟು ವಿದ್ಯುತ್ ಖರ್ಚಾಗುತ್ತದೆ, ಕಳೆದ ನಾಲ್ಕು ವರ್ಷಗಳಲ್ಲಿ ಇದಕ್ಕಾಗಿ ಎಷ್ಟು ಹಣ ವ್ಯಯಿಸಲಾಗಿದೆ ಮತ್ತು ವಿದ್ಯುತ್ ಬಳಕೆ ನಿಯಂತ್ರಣಕ್ಕೆ ಏನಾದರೂ ಸಾಧ್ಯತೆಗಳಿವೆಯೇ ಎಂದು ಅರ್ಜಿದಾರರು ಆರ್‌ಟಿಐ ಅರ್ಜಿಯಲ್ಲಿ ಕೇಳಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿಲ್ಲದ ಜನಾಂಗೀಯ ಹಲ್ಲೆ: ಸುಪ್ರೀಂ ಕೇಂದ್ರಕ್ಕೆ ತರಾಟೆ
ಗಡಿಯಲ್ಲಿ ಗುಂಡಿನ ಕಾಳಗ: ಪಾಕ್ ದಾಳಿಗೆ ಸೈನಿಕ ಬಲಿ
ರಾಜ್ ಠಾಕ್ರೆಗೆ ಜು.13ರವರೆಗೆ ನ್ಯಾಯಾಂಗ ಬಂಧನ
ಸಮುದ್ರ ಮೇಲ್ಸೇತುವೆ ಜೂನ್ 30ರಂದು ಉದ್ಘಾಟನೆ
ಸಲಿಂಗಕಾಮ ಸಕ್ರಮಕ್ಕೆ ಧಾರ್ಮಿಕ ನಾಯಕರು ಕಿಡಿ
ಹಂದಿಜ್ವರ ಪೀಡಿತರ ಸಂಖ್ಯೆ 95