ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತಾಂತ್ರಿಕ ತೊಂದರೆ: ವಿಮಾನ ತುರ್ತು ಭೂಸ್ಪರ್ಷ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಂತ್ರಿಕ ತೊಂದರೆ: ವಿಮಾನ ತುರ್ತು ಭೂಸ್ಪರ್ಷ
ದೆಹಲಿಯಿಂದ ಹೈದಬಾಬಾದ್‌ಗೆ ತೆರಳುತ್ತಿದ್ದ 74 ಮಂದಿ ಪ್ರಯಾಣಿಕರಿದ್ದ ಏರ್‌ಇಂಡಿಯ ವಿಮಾನದಲ್ಲಿ ಸೋಮವಾರ ತಾಂತ್ರಿಕ ತೊಂದರೆ ಕಾಣಿಸಿದ್ದರಿಂದ ಪೈಲಟ್ ನವದೆಹಲಿಯಲ್ಲಿ ಇಂದಿರಾಗಾಂಧಿ ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಷ ಮಾಡಿದರು.

ಏರ್‌ಬಸ್ ಎ-320 ವಿಮಾನದ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಇರುವ ಬಗ್ಗೆ ಕಾಕ್‌ಪಿಟ್ ಪ್ಯಾನೆಲ್ ಸಂಕೇತ ನೀಡಿದ್ದರಿಂದ ತಾವು ಭೂಸ್ಪರ್ಷಕ್ಕೆ ಇಚ್ಛಿಸುವುದಾಗಿ ನಿಯಂತ್ರಣ ಕೇಂದ್ರಕ್ಕೆ ಪೈಲಟ್ ಮಾಹಿತಿ ನೀಡಿದರು. ಅದಾದ ಬಳಿಕ ಅಗ್ನಿಶಾಮಕ ವಾಹನಗಳು ಮತ್ತು ಆಂಬುಲೆನ್ಸ್‌ಗಳ ಸಜ್ಜು ಸೇರಿದಂತೆ ತುರ್ತು ಕವಾಯತು ನಡೆಸಲಾಯಿತು.

ಪ್ಯಾನೆಲ್‌ನಲ್ಲಿ ಹೈಡ್ರಾಲಿಕ್ ಸಮಸ್ಯೆಯ ಸಂಕೇತ ನೀಡಿದ ಕೂಡಲೇ 30 ನಿಮಿಷಗಳ ಕಾಲ ಆಕಾಶದಲ್ಲಿದ್ದ ವಿಮಾನ ಹೈದರಾಬಾದ್‌ಗೆ ತೆರಳುವ ಬದಲಿಗೆ ದೆಹಲಿಗೆ ಹಿಂತಿರುಗಲು ನಿರ್ಧರಿಸಿದರು.ಏರ್ ಇಂಡಿಯ ತಾಂತ್ರಿಕ ಸಿಬ್ಬಂದಿ ವಿಮಾನವನ್ನು ಪರಿಶೀಲಿಸಿದ ಬಳಿಕ, ಪ್ರಯಾಣಿಕರನ್ನು ವಿಶೇಷ ವಿಮಾನದಲ್ಲಿ ಒಯ್ಯಲು ವ್ಯವಸ್ಥೆ ಮಾಡಲಾಯಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಯಾವತಿ ಪ್ರತಿಮೆ ವಿರುದ್ಧ ಸುಪ್ರೀಂ ಶೋಕಾಸ್
ಮಾಯಾಪ್ರತಿಮೆ ಸ್ಥಾಪನೆಗೆ ಕಿಡಿಕಾರಿದ ಚಿದ್ದು
ರಾಷ್ಟ್ರಪತಿ, ಪಿಎಂ, ಸಂಸತ್ ವಿದ್ಯುತ್ ವೆಚ್ಚ 14 ಕೋಟಿ!
ನಿಲ್ಲದ ಜನಾಂಗೀಯ ಹಲ್ಲೆ: ಸುಪ್ರೀಂ ಕೇಂದ್ರಕ್ಕೆ ತರಾಟೆ
ಗಡಿಯಲ್ಲಿ ಗುಂಡಿನ ಕಾಳಗ: ಪಾಕ್ ದಾಳಿಗೆ ಸೈನಿಕ ಬಲಿ
ಹಲ್ಲೆ ಪ್ರಕರಣ: ರಾಜ್ ಠಾಕ್ರೆಗೆ ಕೋರ್ಟ್‌ನಿಂದ ಜಾಮೀನು