ಸ್ವಾತಂತ್ರ್ಯ ಸಂಗ್ರಾಮದ 1919ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕೊನೆಯ ಪ್ರತ್ಯಕ್ಷದರ್ಶಿ ಪಂಜಾಬ್ ಅಮೃತಸರದ ನಿವಾಸಿ ಬಾಪು ಶಿಂಗಾರಾ ಸಿಂಗ್ (113) ಸೋಮವಾರ ವಿಧಿವಶರಾಗಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದಲ್ಲಿ ಅಂದಿನ ಬ್ರಿಟಿಷ್ ಸರ್ಕಾರದ ಅಂಕಿ ಅಂಶದ ಪ್ರಕಾರ ಸಾವನ್ನಪ್ಪಿದವರು 379, 1,100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಆದರೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಅಂದಾಜು 2 ಸಾವಿರ ಮಂದಿ ಗುಂಡಿಗೆ ಬಲಿಯಾಗಿದ್ದರು.
ಜಲಿಯನ್‌ವಾಲಾ ಬಾಗ್ ದುರಂತದಲ್ಲಿ ಪೊಲೀಸರು ಹಾರಿಸಿದ ಗುಂಡು ಬಾಪು ಬಲಗೈಗೆ ತಗುಲಿತ್ತು. ಒಬ್ಬ ಪುತ್ರ, ನಾಲ್ವರು ಪುತ್ರಿಯರು, 11 ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.
1896ರಲ್ಲಿ ಜನಿಸಿದ ಬಾಪು ಅವರು ತಮ್ಮ ಜೀವನದಲ್ಲಿ ಎಂದಿಗೂ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆದಿರಲಿಲ್ಲ. ಜಲಿಯನ್ ವಾಲಾಬಾಗ್ ಮೂಲಸ್ಥಿತಿಯನ್ನು ಸಂರಕ್ಷಿಸಬೇಕು ಎಂಬುದು ಅವರ ಏಕೈಕ ಹೆಬ್ಬಯಕೆಯಾಗಿತ್ತು. ಸ್ವಗ್ರಾಮ ಸುಲ್ತಾನ್‌ವಿಂಡ್‌ನಲ್ಲಿ ಬಾಪು ಅಂತ್ಯಕ್ರಿಯೆ ನಡೆಯಿತು.
ಜಿಲ್ಲಾಡಳಿತದ ಯಾವುದೇ ಅಧಿಕಾರಿಯೂ ಭಾಗವಹಿಸಿರಲಿಲ್ಲವಾಗಿತ್ತು. ಬಾಪು ಅವರು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಇರದ ಕಾರಣ ಹಾಜರಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
|