ಮುಸ್ಲಿಂ ಬಾಲಕಿಯೊಬ್ಬಳು ಸಂಸ್ಕತದಲ್ಲಿ ಪಾರಂಗತಳಾಗಿ ಕೇರಳ ವಿಶ್ವವಿದ್ಯಾಲಯ ನಡೆಸುವ ಸಂಸ್ಕೃತ ವೇದಾಂತ ಪದವಿ ಪರೀಕ್ಷೆಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾಳೆ. ದೇವಸ್ವ ಮಂಡಳಿ ಕೊಲ್ಲಂನ ಸಾಸ್ತಾಕೊಟ್ಟಾದಲ್ಲಿ ನಡೆಸುವ ಕಾಲೇಜಿನ ವಿದ್ಯಾರ್ಥಿಯಾದ 21 ವರ್ಷ ವಯಸ್ಸಿನ ರಹಮತ್, ಸಂಸ್ಕೃತ ನಮ್ಮ ರಾಷ್ಟ್ರದ ಸಂಸ್ಕೃತಿಯ ಸಂಕೇತವೆಂದು ನಂಬಿದ್ದರಿಂದ ತಾವು ಸಂಸ್ಕೃತ ಮತ್ತು ವೇದಾಂತವನ್ನು ಆರಿಸಿಕೊಂಡಿದ್ದಾಗಿ ಹೇಳಿದ್ದಾಳೆ.
ಸಂಪ್ರದಾಯವಾದಿ ಮುಸ್ಲಿಂ ಕುಟುಂಬಕ್ಕೆ ಸೇರಿದ ರಹಮತ್ ಸಂಸ್ಕೃತವನ್ನು ತನ್ನ ಮುಖ್ಯ ವಿಷಯವಾಗಿ ಆರಿಸಿಕೊಂಡಾಗ ತಮ್ಮ ಸಮುದಾಯದಿಂದ ವಿರೋಧ ಎದುರಿಸಲಿಲ್ಲವೆಂದು ಹೇಳಿದ್ದಾಳೆ.
ಬಿಎ ಸಂಸ್ಕೃತ ವೇದಾಂತ ಕೋರ್ಸ್ ತೆಗೆದುಕೊಂಡಾಗ ತನ್ನ ತಂದೆ, ತಾಯಿ ಮತ್ತು ಕುಟುಂಬದ ಇತರೆ ಮಂದಿ ತನಗೆ ಪ್ರೋತ್ಸಾಹ ನೀಡಿದರೆಂದು ಅವಳು ಹೇಳಿದ್ದಾಳೆ. ಕಾಲೇಜಿನ ಉಪನ್ಯಾಸಕರು ಕೂಡ ಪೂರ್ಣ ಬೆಂಬಲ ನೀಡಿದ್ದು, ಪ್ಲಸ್ ಒಂದು ಮಟ್ಟದಲ್ಲೇ ರೆಹಮತ್ ಸಂಸ್ಕೃತವನ್ನು ಎರಡನೇ ಭಾಷೆಯಾಗಿ ಕಲಿಯಲು ಆರಂಭಿಸಿದ್ದಳು. |