ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರ ನಿಗ್ರಹ;ಬೆಂಗ್ಳೂರಿನಲ್ಲೂ ವಿಶೇಷ ಸೇನಾ ಘಟಕ: ಚಿದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರ ನಿಗ್ರಹ;ಬೆಂಗ್ಳೂರಿನಲ್ಲೂ ವಿಶೇಷ ಸೇನಾ ಘಟಕ: ಚಿದು
ಚೆನ್ನೈನಲ್ಲಿ 2ನೇ ಎನ್‌ಎಸ್‌ಜಿ ಘಟಕ ಉದ್ಘಾಟನೆ
ಉದ್ಯಾನಗರಿಯಾದ ಬೆಂಗಳೂರು ಹಾಗೂ ಜೋಧ್‌ಪುರಗಳಲ್ಲಿ ಭಯೋತ್ಪಾದನೆ ನಿಗ್ರಹ ಪಡೆಗಳ ಸ್ಥಾಪನೆಗಾಗಿ ವಿಶೇಷ ಸೇನಾ ಪಡೆಯನ್ನು ಬಳಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬುಧವಾರ ಭರವಸೆ ನೀಡಿದ್ದಾರೆ.

ಅವರು ಚೆನ್ನೈನಲ್ಲಿ ಬುಧವಾರ ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) 2ನೇ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಆದರೆ ಎನ್‌ಎಸ್‌ಜಿ ಘಟಕ ಸ್ಥಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಉಗ್ರರ ಬೆದರಿಕೆ ಹೆಚ್ಚುತ್ತಿದೆ ಎಂದು ಅರ್ಥವಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

ಭಯೋತ್ಪಾದನೆಯನ್ನು ಸಮರ್ಥವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ ನಾವು ವಿಶೇಷ ಸೇನಾ ಪಡೆಗಳನ್ನು ಇದಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಬೆಂಗಳೂರಿನಲ್ಲಿಯೂ ಸೇನೆಯ ವಿಶೇಷ ಪಡೆಯ ಘಟಕ ಸ್ಥಾಪಿಸಲಾಗುವುದು ಎಂದರು. ಅಲ್ಲದೇ ಜೋಧ್‌ಪುರ್ ಮತ್ತು ಗುವಾಹಟಿಯಲ್ಲಿಯೂ ಸೇನೆಯ ವಿಶೇಷ ಪಡೆ ಘಟಕಗಳ ಸ್ಥಾಪನೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.

ಮುಂಬೈ ಭಯೋತ್ಪಾದನೆ ನಂತರ ಮೊದಲ ಹಂತದಲ್ಲಿ ದೇಶದ ಪ್ರಮುಖ ನಗರಗಳಾದ ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತಾದಲ್ಲಿ ಎನ್‌ಎಸ್‌ಜಿ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸೋಮವಾರ ಮುಂಬೈನಲ್ಲಿ ಪ್ರಥಮ ಎನ್ಎಸ್‌ಜಿ ಘಟಕವನ್ನು ಚಿದಂಬರಂ ಉದ್ಘಾಟಿಸಿದ್ದರು.

ಮುಂಬೈ ವಿಮಾನ ನಿಲ್ದಾಣದ ಸಮೀಪಿವಿರುವ ಅಂಧೇರಿಯ ಮರೂಲ್ ಪ್ರದೇಶದ 22 ಎಕರೆ ಪ್ರದೇಶದಲ್ಲಿ ಎನ್ಎಸ್‌ಜಿ ಘಟಕವನ್ನು ಸ್ಫಾಪಿಸಲಾಗಿದೆ. ಎನ್ಎಸ್‌ಜಿ ಕಮಾಂಡೋಗಳಿಗೆ ತರಬೇತಿ ನೀಡಲು ಸುಸಜ್ಜಿತ ಘಟಕವನ್ನು ತಯಾರಿಸಲಾಗಿದೆ. ಪಶ್ಚಿಮ ಭಾಗದಲ್ಲಿ ನಡೆಯುವ ಭಯೋತ್ಪಾದನೆ ಕೃತ್ಯ ತಡೆಯಲು ಸರಕಾರ ಘಟಕವನ್ನು ಸ್ಥಾಪಿಸಿದೆ.

ಕಳೆದ ವರ್ಷ ನವೆಂಬರ್ 26 ರಂದು ಲಷ್ಕರ್ ಇ ತೊಯ್ಬಾ ಸಂಘಟನೆಗಳು ಮುಂಬೈ ಮೇಲೆ ನಡೆಸಿದ ವಿಧ್ವಂಸಕ ಕೃತ್ಯ ನಡೆದಾಗ ಎನ್ಎಸ್‌ಜಿ ಘಟಕ ಮುಂಬೈ ತಲುಪಲು ಸಮಯ ತೆಗೆದುಕೊಂಡಿತ್ತು. ಅಷ್ಟೊತ್ತಿಗಾಗಲೇ ಜೀವಹಾನಿ, ಆಸ್ತಿ ಹಾನಿ ನಡೆದು ಹೋಗಿತ್ತು. ಸರಕಾರದ ಈ ಕ್ರಮದಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚತ್ತುಕೊಂಡ ಸರಕಾರ ದೇಶದ ಇತರೆ ಪ್ರದೇಶಗಳಲ್ಲಿ ಕೂಡಾ ಎನ್ಎಸ್‌ಜಿ ಘಟಕ ಸ್ಥಾಪಿಸಲು ನಿರ್ಧರಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೇತುವೆಗೆ ರಾಜೀವ್ ಹೆಸರೇಕೆ;ಸಾವರ್ಕರ್ ಹೆಸರಿಡಿ: ಸೇನೆ
ಬಾಬ್ರಿ ಧ್ವಂಸಕ್ಕೆ ಆಡ್ವಾಣಿ ಕಾರಣರಲ್ಲ?: ಲಿಬರ್ಹಾನ್ ವರದಿ
ಮುಂದುವರಿದ ಮುಂಗಾರು: ಜಾರ್ಖಂಡ್‌ನಲ್ಲಿ 13 ಬಲಿ
ವಲಸೆ ಕಾರ್ಮಿಕರ ಭದ್ರತೆ: ಸೋನಿಯಾ ಭರವಸೆ
ವಿದೇಶಾಂಗ ಕಾರ್ಯದರ್ಶಿಯಾಗಿ ನಿರುಪಮಾ ರಾವ್
ಅಯೋಧ್ಯೆ: ಹೊಣೆ ಹೊರುವೆ, ಗಲ್ಲಿಗೇರಲು ಸಿದ್ಧ - ಉಮಾ