ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತ ಲಿಬರ್ಹಾನ್ ಆಯೋಗದ ವರದಿ ಮಂಡನೆಯಿಂದ ಸಾರ್ವತ್ರಿಕ ಚುನಾವಣೆ ಬಳಿಕ ಗುರುವಾರ ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಜಕೀಯ ಬಿಸಿ ಹುಟ್ಟಿಸಿ ಕೋಲಾಹಲ ಮೂಡಿಸಲಿದೆಯೆಂದು ನಿರೀಕ್ಷಿಸಲಾಗಿದೆ.
ಬಾಬ್ರಿ ಮಸೀದಿ ಧ್ವಂಸ ಕುರಿತ ಲಿಬರ್ಹಾನ್ ಆಯೋಗದ ವರದಿ ಮಂಡನೆಯ ಬಳಿಕ ಬಜೆಟ್ ಅಧಿವೇಶನದ ವ್ಯಾವಹಾರಿಕ ಸ್ವರೂಪ ದಿಢೀರ್ ಬದಲಾಗಿದ್ದು, ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದೆಂದು ನಿರೀಕ್ಷಿಸಲಾಗಿದೆ.ಪ್ರಧಾನಿಗೆ ಮಂಡಿಸಲಾಗಿರುವ ವರದಿಯ ಒಕ್ಕಣೆ ಇನ್ನೂ ನಿಗೂಢವಾಗಿ ಉಳಿದಿದ್ದು, ಕೇಂದ್ರಸರ್ಕಾರ ತನ್ನ ಪಿತೂರಿಯನ್ನು ಆರಂಭಿಸಿದೆಯೆಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ತನ್ನ 6 ವರ್ಷಗಳ ಆಡಳಿತಾವಧಿಯಲ್ಲಿ ಆಯೋಗವನ್ನು ಏಕೆ ರದ್ದುಮಾಡಿಲ್ಲವೆಂದು ಕಾಂಗ್ರೆಸ್ ಪ್ರತಿದಾಳಿ ನಡೆಸಿದೆ.ಹಣಕಾಸು ಕೇಂದ್ರಿತ ಅಧಿವೇಶನದಲ್ಲಿ ಜು.3ರಂದು ರೈಲ್ವೆ ಬಜೆಟ್ ಮತ್ತು ಜು.6ರಂದು ಸಾಮಾನ್ಯ ಬಜೆಟ್ ಮಂಡಿಸಲಾಗುವುದು. ಆರ್ಥಿಕ ಸಮೀಕ್ಷೆಯನ್ನು ಗುರುವಾರ ಬಜೆಟ್ ಅಧಿವೇಶನದ ಆರಂಭದ ದಿನವೇ ಮಂಡಿಸಲಾಗುವುದು. |