ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಸಿಗಲು ವಿಫಲವಾದ 17 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಪೂರ್ವ ದೆಹಲಿಯ ತನ್ನ ನಿವಾಸದಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತನ್ನ 12ನೇ ತರಗತಿ ಫಲಿತಾಂಶ ಪ್ರಕಟವಾದ ಕೂಡಲೇ ದೆಹಲಿಯ ಐದು ಕಾಲೇಜುಗಳಲ್ಲಿ ಬಿಎ ಇಂಗ್ಲೀಷ್ ಕೋರ್ಸ್ ಪ್ರವೇಶಕ್ಕೆ ಪ್ರಚಿ ಸಿಂಗ್ ಗೌರ್ ಅರ್ಜಿ ಸಲ್ಲಿಸಿದ್ದಳು. ಆದರೆ ಆದರೆ ವಿವಿಯ ಎರಡು ಕಟ್-ಆಫ್ ಅಂಕಗಳ ಪಟ್ಟಿಗಳಲ್ಲಿ ತನ್ನ ಹೆಸರು ಇಲ್ಲದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುದ್ದಿ ನಿರೂಪಕಿಯಾಗಲು ಕನಸು ಕಂಡಿದ್ದ ಪ್ರಚಿ ತನ್ನ ಸ್ನೇಹಿತೆಯರಿಗೆ ಎರಡನೇ ಕಟ್ ಆಫ್ ಅಂಕಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿ ತನಗೆ ಸಿಗದಿದ್ದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದಳು.
ಪುತ್ರಿಯ ಹಠಾತ್ ಸಾವಿನ ದುಃಖದಿಂದ ಚೇತರಿಸಿಕೊಳ್ಳಲು ಗೋಪಾಲ್ ಸಿಂಗ್ ಗೌರ್‌ಗೆ ಸಾಧ್ಯವಾಗಿಲ್ಲ. ಪ್ರಚಿ ಆತ್ಮಹತ್ಯೆ ಟಿಪ್ಪಣಿ ಬರೆದಿಡದಿದ್ದರೂ ದೆಹಲಿ ವಿವಿಯಲ್ಲಿ ಪ್ರವೇಶ ಸಿಗದಿದ್ದಕ್ಕೆ ತೀವ್ರ ನೊಂದಿದ್ದಳೆಂದು ಆಕೆಯ ಕುಟುಂಬ ತಿಳಿಸಿದೆ.12ನೇ ತರಗತಿ ಪರೀಕ್ಷೆಯಲ್ಲಿ ಪ್ರತಿ ಶೇ.46 ಅಂಕ ಗಳಿಸಿದ್ದಳು.
ಆದರೆ ಬಿಎ ಕೋರ್ಸ್ ಪ್ರವೇಶಕ್ಕೆ ಕನಿಷ್ಠ ಅಂಕವನ್ನು ಪ್ರಚಿ ಪಡೆದ ಅಂಕಕ್ಕಿಂತ ಶೇ.15ರಷ್ಟು ಹೆಚ್ಚಿಗೆಯಿತ್ತು. ಎರಡು ಪಟ್ಟಿಗಳಲ್ಲಿ ತನ್ನ ಹೆಸರು ಕಾಣದೇ, ಮೂರನೇ ಪಟ್ಟಿಯಲ್ಲೂ ಹೆಸರು ಕಾಣದಿದ್ದಾಗ ತೀವ್ರ ಖಿನ್ನತೆಗೆ ಒಳಗಾದಳೆಂದು ಗೌರ್ ತಿಳಿಸಿದ್ದಾರೆ. |