ಅಸ್ಸಾಂನಲ್ಲಿ ಮುಂಗಾರು ಮಳೆಯಿಂದ ಉದ್ಭವಿಸಿದ ಪ್ರವಾಹಗಳು ತೀವ್ರ ಹಾನಿವುಂಟುಮಾಡಿವೆ. ಎರಡು ದಿನಗಳಲ್ಲಿ ಅಂದಾಜು ಎರಡು ಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಮತ್ತು 300 ಗ್ರಾಮಗಳು ಜಲಾವೃತವಾಗಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಲಖಿಂಪುರ, ದೇಮಜಿ, ಜೋಹ್ರಾಟ್ ಮತ್ತು ನಾಗಾನ್ ನಗರಗಳು ಪ್ರವಾಹದ ಪ್ರಕೋಪಕ್ಕೆ ಗುರಿಯಾಗಿ ಎರಡು ಲಕ್ಷ ಜನರು ಸಂತ್ರಸ್ತರಾಗಿದ್ದಾರೆಂದು ಅಸ್ಸಾಂ ಕಂದಾಯ ಮತ್ತು ಪುನರ್ವಸತಿ ಸಚಿವ ಭುಮಿಂದರ್ ಬರ್ಮನ್ ತಿಳಿಸಿದ್ದಾರೆ.
ಅನೇಕ ಮಂದಿ ಸಂತ್ರಸ್ತರು ತಾತ್ಕಾಲಿಕ ಶಿಬಿರಗಳಲ್ಲಿ ತಂಗಿದ್ದಾರೆ.ದಕ್ಷಿಣ ಏಷ್ಯಾದ ದೊಡ್ಡ ನದಿ ದ್ವೀಪವಾದ ಮಜುಲಿಯಲ್ಲಿ ಎರಡು ಒಡ್ಡುಗಳು ಒಡೆದುಹೋಗಿದ್ದು, ಪರಿಸ್ಥಿತಿ ಗಂಭೀರವಾಗಿದೆಯೆಂದು ಪ್ರವಾಹ ನಿಯಂತ್ರಣ ಸಚಿವ ಪ್ರಥ್ವಿ ಮಾಜಿ ತಿಳಿಸಿದ್ದಾರೆ.
ಪ್ರವಾಹಪೀಡಿತ ಜನರಿಗೆ ನಾವು ಆಹಾರ ಮತ್ತು ವೈದ್ಯಕೀಯ ನೆರವು ನೀಡುತ್ತಿದೆಯೆಂದು ಬರ್ಮನ್ ತಿಳಿಸಿದರು.ಬ್ರಹ್ಮಪುತ್ರ ನದಿ ಮತ್ತು ಅದರ ಉಪನದಿಗಳು 8 ಕಡೆಗಳಲ್ಲಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆಯೆಂದು ಕೇಂದ್ರ ಜಲಸಮಿತಿಯ ಬುಲೆಟಿನ್ ಶುಕ್ರವಾರ ತಿಳಿಸಿದೆ. |