ಕೇಂದ್ರ ರೈಲ್ವೆ ಸಚಿವೆ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಕೆಲವೊಂದು ಆಡಳಿತಾತ್ಮಕ ಲೋಪಗಳಿವೆ ಎಂದು ರೈಲ್ವೆ ಮಾಜಿ ಸಚಿವ, ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಟೀಕಿಸಿದ್ದಾರೆ.15 ನೇ ಲೋಕಸಭೆಯ ಚೊಚ್ಚಲ ರೈಲ್ವೆ ಬಜೆಟ್ ಅನ್ನು ಶುಕ್ರವಾರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮಂಡಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಾಲೂ, 'ನನ್ನ ಉತ್ತಮ ಕೆಲಸಗಳಿಗೆ ಹೊಸ ಬಜೆಟ್ ತಡೆಯಾಗಿದೆ' ಎಂದು ದೂರಿದರು.ನನ್ನ ಅವಧಿಯಲ್ಲಿ ರೈಲ್ವೆ ಇಲಾಖೆ 91ಸಾವಿರ ಕೋಟಿ ರೂಪಾಯಿಯಷ್ಟು ಆದಾಯಗಳಿಸಿತ್ತು. ಅಲ್ಲದೇ ನಾನು ಬಜೆಟ್‌ನಲ್ಲಿ ತಾರತಮ್ಯ ಮಾಡಿರಲಿಲ್ಲ. ಆದರೆ ಬ್ಯಾನರ್ಜಿ ಮಂಡಿಸಿರುವ ಬಜೆಟ್‌ನಲ್ಲಿ ಬಿಹಾರಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.ಈ ಬಾರಿಯ ರೈಲ್ವೆ ಬಜೆಟ್ ಜನಪರ ಎಂದಿರುವ ಬ್ಯಾನರ್ಜಿ ಹೇಳಿಕೆಯನ್ನು ಟೀಕಿಸಿರುವ ಅವರು, ಇದರಲ್ಲಿ ಯಾವುದೇ ಜನಪರ ಯೋಜನೆಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿಡಿಸಿದ್ದು, ಯೋಜನೆಯ ಮಂಡನೆಯಲ್ಲಿ ಕೆಲ ಲೋಪದೋಷಗಳಿವೆ ಎಂದು ತಿಳಿಸಿದ್ದಾರೆ. |