ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿ ದೇಶಾದ್ಯಂತ ಹೀರೋ ಆಗಿ ಕಂಗೊಳಿಸಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ ವಿರುದ್ಧ ದೋಷಾರೋಪ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಗಾಂಧಿ ಮತ್ತೊಮ್ಮೆ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ.ಪ್ರಚೋದನಾಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಪಿಲಿಭಿಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಚಾರ್ಜ್‌ಶೀಟ್ ದಾಖಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.ದೋಷಾರೋಪ ಸಲ್ಲಿಸುವ ಬಗ್ಗೆ ಗೃಹ ಸಚಿವಾಲಯ ಕಾನೂನು ಇಲಾಖೆಯ ಸಲಹೆ ಕೇಳಿತ್ತು. ಚಾರ್ಜ್‌ಶೀಟ್ ಸಲ್ಲಿಸಲು ಕಾನೂನು ಇಲಾಖೆಯ ಸಲಹೆ ಕೇಳಿತ್ತು. ಚಾರ್ಜ್‌ಶೀಟ್ ಸಲ್ಲಿಸಲು ಕಾನೂನು ಇಲಾಖೆ ಗುರುವಾರ ಒಲವು ವ್ಯಕ್ತಪಡಿಸಿತ್ತು.ವರುಣ್ ವಿರುದ್ಧ ದೋಷಾರೋಪ ಸಲ್ಲಿಸಲು ಅನುಮತಿ ಕೋರಿ ಪಿಲಿಭಿಟ್ ಪೊಲೀಸರು ಕಳೆದ ತಿಂಗಳು ಉತ್ತರ ಪ್ರದೇಶ ಸರ್ಕಾರದ ಅನುಮತಿ ಕೋರಿತ್ತು. |