ಅಸ್ಸಾಂ ಮತ್ತು ಬಿಹಾರ ರಾಜ್ಯಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ನೀರು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಅಸ್ಸಾಂನಲ್ಲಿ 3ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ. 300ಗ್ರಾಮಗಳು ಜಲಾವೃತವಾಗಿದೆ. ಮಜುಲಿ ನದಿಯಲ್ಲಿರುವ ದ್ವೀಪಗಳು ಮುಳುಗಡೆಯಾಗಿದ್ದರೆ, ಕಿರು ಅಣೆಕಟ್ಟುಗಳು ಕೊಚ್ಚಿ ಹೋಗಿವೆ. ಬ್ರಹ್ಮಪುತ್ರನದಿ ಅಪಾಯದ ಮೇರೆ ಮೀರಿ ಹರಿಯುತ್ತಿದೆ. 3ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ ಎಂದು ಸರ್ಕಾರದ ವರದಿ ತಿಳಿಸಿದೆ.
ಬಿಹಾರದಲ್ಲಿ ಕೋಸಿ, ಗಂಡಕಿ, ಬುಧಿ, ಬಾಗ್ಮತಿ ನದಿಗಳು ತುಂಬಿ ಹರಿಯುತ್ತಿರುವುದರಿಂದ ದಡದಲ್ಲಿರುವ ಗ್ರಾಮಗಳು ಮುಳುಗಡೆಯ ಆತಂಕದಲ್ಲಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅಸ್ಸಾಮಿನ ಲಖಿಂಪುರ, ಧೇಮಜಿ, ಜೋರಟ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ನೆರೆ ನೀರಿನಿಂದಾಗಿ ಕಳೆದ ಎರಡು ದಿನಗಳ ಅವಧಿಯಲ್ಲಿ 350ಕ್ಕೂ ಅಧಿಕ ಗ್ರಾಮಗಳ 2ಲಕ್ಷ ಜನರು ವಸತಿಹೀನರಾಗಿದ್ದಾರೆ. ಸಂತ್ರಸ್ತರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ಪುನರ್ವಸತಿ ಮಾಡಲಾಗಿದೆ. |