ರಾಜ್ಯದ ಗುರೇಜ್ ವಲಯದಲ್ಲಿ ಹಿಮದಲ್ಲಿ ಹೂತುಹೋಗಿದ್ದ 6 ಮಂದಿ ಭಯೋತ್ಪಾದಕರ ದೇಹಗಳನ್ನು ಸೇನೆ ಪತ್ತೆಹಚ್ಚಿದೆ. ಸೇನೆಯ ಮೂಲಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಭಯೋತ್ಪಾದಕರು ಯತ್ನಿಸಿದರು.
ಆದರೆ ಭಾರೀ ಹಿಮ ಮತ್ತು ಹಿಮಪಾತದಿಂದ 6ರಿಂದ 8 ಮಂದಿ ಹಿಮದ ರಾಶಿಯಲ್ಲಿ ಹೂತುಹೋಗಿದ್ದರು. ಪ್ರತಿಕೂಲ ಹವಾಮಾನ ಮತ್ತು ಭಾರೀ ಹಿಮಪಾತದಿಂದ ದೇಹಗಳನ್ನು ಪತ್ತೆಹಚ್ಚಲು ಸುಮಾರು 3 ತಿಂಗಳು ತೆಗೆದುಕೊಂಡಿತೆಂದು ಅವರು ಹೇಳಿದ್ದಾರೆ.
ಉಳಿದ ದೇಹಗಳನ್ನು ಪತ್ತೆಮಾಡಲು ಶೋಧ ಮುಂದುವರಿದಿದ್ದು, ಸತ್ತ ಭಯೋತ್ಪಾದಕರು ಹಿಮಚ್ಛಾದಿತ ಉತ್ತರ ಕಾಶ್ಮೀರದ ಕಡಿದಾದ ಮಾರ್ಗಗಳಲ್ಲಿ ನುಸುಳಲು ಸೂಕ್ತ ಉಡುಪಿನೊಂದಿಗೆ ಪೂರ್ಣ ಸಜ್ಜಾಗಿದ್ದರೆಂದು ಅವರು ತಿಳಿಸಿದ್ದಾರೆ. ಭಯೋತ್ಪಾದಕರ ಬಳಿಯಿದ್ದ 7 ಎಕೆ-47 ರೈಫಲ್ಲುಗಳನ್ನು ಪತ್ತೆಹಚ್ಚಲಾಗಿದೆಯೆಂದು ಅವರು ನುಡಿದಿದ್ದಾರೆ. |