ಚತ್ತೀಸ್‌ಗಢದ ವ್ಯಾಪಾರಿಗಳು ಮತ್ತು ಅರಣ್ಯ ಉತ್ಪನ್ನದಾರರ, ಟ್ರಾನ್ಸ್‌ಪೋರ್ಟ್, ಕಬ್ಬಿಣದ ಅದಿರು ಗಣಿ ಸಂಸ್ಥೆಯಿಂದ ಮಾವೋ ಬಂಡುಕೋರರು ವಾರ್ಷಿಕವಾಗಿ ಸುಮಾರು 300ಕೋಟಿ ರೂಪಾಯಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ರಮಣ್ ಸಿಂಗ್ ಗಂಭೀರವಾಗಿ ಆರೋಪಿಸಿದ್ದಾರೆ.
ರಾಜ್ಯದ ದಕ್ಷಿಣ ಬಸ್ತಾರ್‌ನಿಂದ ಉತ್ತರದ ಸುರ್ಗುಜಾ ಜಿಲ್ಲೆಯವರೆಗೆ ಮಾವೋ ಬಂಡುಕೋರರು ವಾರ್ಷಿಕವಾಗಿ ಸುಮಾರು 250ರಿಂದ 300ಕೋಟಿ ರೂಪಾಯಿಯವರೆಗೆ ತಮ್ಮ ಸುಲಿಗೆ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಕ್ಸಲೀಯರು ಮುಖ್ಯವಾಗಿ 'ಟೆಂಡೂ ಎಲೆ (ಬೀಡಿ ಕಟ್ಟುವ ಎಲೆ) ವ್ಯಾಪಾರಿಗಳು, ಕಬ್ಬಿಣದ ಅದಿರು ಗಣಿ ಮಾಲೀಕರಿಂದ, ದೊಡ್ಡ ಗುತ್ತಿಗೆದಾರರನ್ನು ಗುರಿಯಾಗಿರಿಸಿಕೊಂಡು ಹಣ ವಸೂಲಿ ಮಾಡುತ್ತಾರೆ' ಎಂದು 57ರ ಹರೆಯದ ರಮಣ್ ಸಿಂಗ್ ಆಪಾದಿಸಿದ್ದಾರೆ.
ಬೀಡಿಕಟ್ಟುವ ಎಲೆ ರಾಜ್ಯದ ಬಸ್ತಾರ್ ಜಿಲ್ಲೆಯಲ್ಲಿನ ಪ್ರಮುಖ ಅರಣ್ಯ ಉತ್ಪನ್ನವಾಗಿದ್ದು, 1980ರಿಂದ ತಮ್ಮ ಸಂಘಟನೆಯ ಬಲಪಡಿಕೆಗಾಗಿ ನಕ್ಸಲೀಯರು ಅಂತಹ ಪ್ರಮುಖ ಅರಣ್ಯ ಉತ್ಪನ್ನದಾರರನ್ನೇ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದಿದ್ದಾರೆ. |