ಗಾಜಿಯಾಬಾದ್ ರೈಲ್ವೆ ನಿಲ್ದಾಣದ ಬಳಿ ಪೆಟ್ರೋಲ್ ತುಂಬಿದ ಸರಕುಸಾಗಣೆ ರೈಲಿಗೆ ದೆಹಲಿಗೆ ತೆರಳುತ್ತಿದ್ದ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದಿದ್ದರಿಂದ ಚಾಲಕ ಮತ್ತು ಕಾವಲುಗಾರ ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದ ಕಡೆ 310 ಅಂಬಾಲಾ ಸಹರಾನ್‌ಪುರ ನಿಜಾಮುದ್ದೀನ್ ಪ್ರಯಾಣಿಕರ ರೈಲು ತೆರಳುತ್ತಿದ್ದಾಗ ಕಳೆದ ರಾತ್ರಿ 11.50ಕ್ಕೆ ಅಪಘಾತ ಸಂಭವಿಸಿತು ಎಂದು ರೈಲ್ವೆ ವಕ್ತಾರ ಎ.ಎಸ್.ನೇಗಿ ತಿಳಿಸಿದ್ದಾರೆ.ನಾಜಿಯಬಾದ್‌ನಿಂದ ಅಸಾವೋಟಿಗೆ ತೆರಳುತ್ತಿದ್ದ ಸರಕುಸಾಗಣೆ ರೈಲು ಸಿಗ್ನಲ್‌ನಲ್ಲಿ ನಿಂತಿದ್ದಾಗ ಹಿಂಭಾಗದಿಂದ ಪ್ರಯಾಣಿಕ ರೈಲು ಡಿಕ್ಕಿ ಹೊಡೆಯಿತೆಂದು ತಿಳಿದುಬಂದಿದೆ.
ಸರಕುಸಾಗಣೆ ರೈಲಿನ ಗಾರ್ಡ್ ಆರ್.ಕೆ. ಶಾಮ್ ಮತ್ತು ಪ್ರಯಾಣಿಕರು ರೈಲಿನ ಸಹಾಯಕ ಚಾಲಕ ಗಾಯಗೊಂಡಿದ್ದು ಅವರನ್ನು ಸರ್ವೋದಯ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡ ಐವರು ಪ್ರಯಾಣಿಕರನ್ನು ಎಂಎನ್‌ಜಿ ಮತ್ತು ಯಶೋದಾ ಆಸ್ಪತ್ರೆಗೆ ಸೇರಿಸಲಾಗಿದೆ. |