ಕೋಲ್ಕತಾದ ಹೌರಾಬ್ರಿಜ್ನಿಂದ ಕೆಳಕ್ಕೆ ರೈಲ್ವೆ ಹಳಿ ಮೇಲೆ ಶನಿವಾರ ಮಿನಿಬಸ್ಸೊಂದು ಉರುಳಿಬಿದ್ದು ಸುಮಾರು 10 ಜನರು ಸತ್ತಿರುವರೆಂದು ಶಂಕಿಸಲಾಗಿದೆ. ಸತ್ತವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
ಚಾಲಕನ ಅತಿಯಾದ ವೇಗವೇ ಈ ದುರ್ಘಟನೆಗೆ ಕಾರಣವೆಂದು ಹೇಳಲಾಗಿದೆ.,ಹೌರಾದಿಂದ ನಾಝರ್ಗಂಜ್ ಕಡೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸುಮಾರು 50 ಅಡಿ ಅಂತರದಿಂದ ಬಸ್ ಬಿದ್ದಿರುವುದರಿಂದ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಹೇಳಲಾಗಿದೆ. ಬಸ್ಸಿನಲ್ಲಿ ಸುಮಾರು 40-50 ಮಂದಿ ಪ್ರಯಾಣಿಕರಿದ್ದರು.
ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಅವಶೇಷದಿಂದ 4-5 ಶವಗಳನ್ನು ಹೊರತೆಗೆದಿದ್ದಾರೆ. ರೈಲ್ವೆ ಹಳಿ ಮೇಲೆ ಬಸ್ ಬಿದ್ದಿರುವುದರಿಂದ ಆ ಮಾರ್ಗದ ರೈಲ್ವೆ ಸಂಚಾರಕ್ಕೆ ಅಡ್ಡಿಯಾಗಿದೆ.ಅದೃಷ್ಟವಶಾತ್ ಬ್ರಿಜ್ ಕೆಳಗೆ ಯಾವುದೇ ರೈಲು ಚಲಿಸುತ್ತಿದ್ದಲ್ಲಿ ಇನ್ನಷ್ಟು ಅಪಾಯ ಉಂಟಾಗುತ್ತಿತ್ತೆಂದು ಹೇಳಲಾಗಿದೆ. |