ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಖಗೋಳ ವೀಕ್ಷಕರಿಗೆ ಆಕಾಶದಲ್ಲಿ ಅಪರೂಪದ ಚಮತ್ಕಾರಗಳು ಕಂಡುಬರಲಿದ್ದು, ಜು.7ರಿಂದ ತ್ರಿವಳಿ ಗ್ರಹಣಗಳು ಗೋಚರಿಸಲಿವೆ.
ತ್ರಿವಳಿ ಗ್ರಹಣಗಳ ಸರಮಾಲೆಯಲ್ಲಿ ಮೊದಲಿಗೆ ಜು.7ರಂದು ಆಂಶಿಕ ಚಂದ್ರಗ್ರಹಣ ಗೋಚರಿಸಲಿದ್ದರೆ(ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದು), ಜು.22ರಂದು ಸೂರ್ಯಗ್ರಹಣ ಮತ್ತು ಆಗಸ್ಟ್ 7ರಂದು ಇನ್ನೊಂದು ಚಂದ್ರಗ್ರಹಣವು ಗೋಚರಿಸಲಿದೆಯೆಂದು ನಗರ ಮೂಲದ ಪ್ಲ್ಯಾನೆಟರಿ ಸೊಸೈಟಿಯ ರಘುನಂದನ್ ಕುಮಾರ್ ಹೇಳಿದ್ದಾರೆ.ಜುಲೈ ಏಳರಂದು ಸಂಭವಿಸುವ ಎರಡನೇ ಪೆನಂಬ್ರ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಆದರೆ ಆಗಸ್ಟ್ 7ರಂದು ಮೂರನೇ ಚಂದ್ರಗ್ರಹಣವು ರಾಷ್ಟ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆಂದು ಅವರು ಹೇಳಿದ್ದಾರೆ. ಜುಲ್ಲೈ 22 ರಂದು ಸಂಭವಿಸುವ ಪೂರ್ಣ ಸೂರ್ಯಗ್ರಹಣದ ವೀಕ್ಷಣೆ ಜನರಿಗೆ ಜೀವಮಾನ ಕಾಲದ ಅವಕಾಶವೆಂದು ಹೇಳಲಾಗಿದೆ. |