ಉತ್ತರಖಂಡ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ 22 ವರ್ಷ ವಯಸ್ಸಿನ ಎಂಬಿಎ ವಿದ್ಯಾರ್ಥಿ ರಣಬೀರ್ ಸಿಂಗ್ ಅವರ ಮೃತದೇಹವನ್ನು ಗಾಜಿಯಾಬಾದ್‌ನಲ್ಲಿರುವ ಅವರ ಮನೆಗೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿಯನ್ನು ಭಾನುವಾರ ನಿರೀಕ್ಷಿಸಲಾಗಿದೆ. ಏತನ್ಮಧ್ಯೆ ರಣಬೀರ್ ನಿಷ್ಕಳಂಕ ವ್ಯಕ್ತಿತ್ವ ಹೊಂದಿದ್ದು, ಅವನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆಯೆಂದು ರಣಬೀರ್ ಕುಟುಂಬ ಆರೋಪಿಸಿದೆ.
ಪೊಲೀಸರು ಹತ್ಯೆ ತನಿಖೆಗೆ ಸಹಕರಿಸುತ್ತಿಲ್ಲವೆಂದೂ ರಣಬೀರ್ ಕುಟುಂಬ ಆಪಾದನೆ ಮಾಡಿದೆ. ಪೊಲೀಸರು ನಮ್ಮ ಪುತ್ರನನ್ನು ಕೊಂದಿರುವ ಹಿನ್ನೆಲೆಯಲ್ಲಿ ಅಸಹಕಾರ ತೋರುತ್ತಿದ್ದಾರೆ. ಮಾಧ್ಯಮ ಮತ್ತು ಸ್ಥಳೀಯ ನಿವಾಸಿಗಳು ನಮಗೆ ಬೆಂಬಲವಾಗಿ ನಿಂತಿದ್ದಾರೆಂದು ರಣಬೀರ್ ತಂದೆ ರವೀಂದರ್ ಸಿಂಗ್ ತಿಳಿಸಿದ್ದಾರೆ.
'ರಣಬೀರ್ ಮತ್ತು ಇಬ್ಬರು ಸ್ನೇಹಿತರು ಕಳವು ಮಾಡಿದ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು.ರಣಬೀರ್ ವಿರುದ್ಧ ಕ್ರಿಮಿನಲ್ ದಾಖಲೆ ಇಲ್ಲದಿದ್ದರೂ ಅವನ ಜತೆಗಿದ್ದ ಸ್ನೇಹಿತರು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂದು' ಪೊಲೀಸ್ ಅಧಿಕಾರಿ ಅಮೀರ್ ಸಿನ್ಹಾ ತಿಳಿಸಿದ್ದಾರೆ. ರಣಬೀರ್ ಎನ್‌ಕೌಂಟರ್ ಹತ್ಯೆಯನ್ನು ಕುರಿತು ಮುಖ್ಯಮಂತ್ರಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ. |