ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎರಡು ಕಾರ್ಖಾನೆಗಳ ಸ್ಫೋಟಕ್ಕೆ ಐದು ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎರಡು ಕಾರ್ಖಾನೆಗಳ ಸ್ಫೋಟಕ್ಕೆ ಐದು ಬಲಿ
ಸಿಂಗ್ರೌಲಿ: ಎರಡು ಸ್ಫೋಟಕ ತಯಾರಿಕೆ ಕಾರ್ಖಾನೆಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದರಿಂದ ಭಾರೀ ಬೆಂಕಿ ಅನಾಹುತ ಉಂಟಾಗಿ ಕನಿಷ್ಠ ಐವರು ಸತ್ತಿದ್ದು ಸುಮಾರು 100 ಜನರು ಗಾಯಗೊಂಡ ಘಟನೆ ಮಧ್ಯಪ್ರದೇಶದಲ್ಲಿ ಸಿಂಗ್ರೌಲಿ ಜಿಲ್ಲೆಯಲ್ಲಿ ಸಂಭವಿಸಿದೆ.

ಬೈರ್ಹಾನ್ ಕೈಗಾರಿಕೆ ಪ್ರದೇಶದಲ್ಲಿದ್ದ ಎರಡು ಕಾರ್ಖಾನೆಗಳು ಸುಟ್ಟು ಅವಶೇಷಗಳಾಗಿದ್ದರಿಂದ ಸತ್ತವರ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ಶಂಕಿಸಲಾಗಿದೆ. ಐಡಿಯಲ್ ಸ್ಫೋಟಕ ತಯಾರಿಕೆ ಕೈಗಾರಿಕೆಯಲ್ಲಿ ಮೊದಲ ಸ್ಫೋಟ ಸಂಭವಿಸಿತು. ಈ ಸ್ಫೋಟವು ನೆರೆಯ ರಾಜಸ್ತಾನ ಸ್ಫೋಟಕ ಕೈಗಾರಿಕೆಯಲ್ಲಿ ಮತ್ತೊಂದು ಸ್ಫೋಟಕ್ಕೆ ಉದ್ದೀಪಿಸಿತು.

ಸ್ಫೋಟಗಳಿಂದಾಗಿ ಕನಿಷ್ಠ ಕೈಗಾರಿಕೆ ವಲಯದಲ್ಲಿರುವ ಕನಿಷ್ಠ 15 ಕಾರ್ಖಾನೆಗಳು ಹಾನಿಗೊಂಡಿವೆಯೆಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡರವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಭರದಿಂದ ಸಾಗಿವೆಯೆಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇವಿಎಂ ದೋಷದ ತನಿಖೆಗೆ ಆದೇಶಿಸಿಲ್ಲ: ಆಯೋಗ
ನಕ್ಸಲರಿಂದ ಒತ್ತೆಯಾಳುಗಳ ಬಿಡುಗಡೆ
ಪಟಾಕಿ ಕಾರ್ಖಾನೆಗೆ ಬೆಂಕಿ: 5 ಸಾವು
ಭೂಗತಜಗತ್ತಿನಿಂದ ಬೆದರಿಕೆ: ವರುಣ್ ಬಹಿರಂಗ
ಕಾರು ಮಾರಿದರು, ಕಚೇರಿಗೆ ಕುದುರೆ ಏರಿದರು
ರಣಬೀರ್ ಎನ್‌ಕೌಂಟರ್ ಹತ್ಯೆ: ಇಂದು ಶವಪರೀಕ್ಷೆ