ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚತ್ತೀಸ್‌ಗಢದಲ್ಲಿ ಸ್ಫೋಟಕಗಳ ವ್ಯಾನ್ ಕಣ್ಮರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚತ್ತೀಸ್‌ಗಢದಲ್ಲಿ ಸ್ಫೋಟಕಗಳ ವ್ಯಾನ್ ಕಣ್ಮರೆ
ಕೈಗಾರಿಕೆ ಬಳಕೆಗಾಗಿ ಸ್ಫೋಟಕಗಳನ್ನು ತುಂಬಿದ್ದ ಖಾಸಗಿ ವ್ಯಾನ್ ಚತ್ತೀಸ್‌ಗಢದ ಮಾವೋವಾದಿ ಭದ್ರಕೋಟೆಯಾದ ಬಸ್ತಾರ್‌ನಲ್ಲಿ ಕಣ್ಮೆರೆಯಾಗಿದ್ದು, ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲವೆಂದು ಹೇಳಲಾಗಿದೆ. ಸ್ಫೋಟಕಗಳನ್ನು ತುಂಬಿದ ಎರಡು ಮಹೀಂದ್ರ ಮ್ಯಾಕ್ಸ್ ಪಿಕಪ್ ವ್ಯಾನುಗಳು ರಾಯಪುರದಿಂದ ಕಬ್ಬಿಣದ ಅದಿರು ಸಮೃದ್ಧಿಯಾಗಿರುವ ಬೈಲಾಡಿಲಾದ ಪ್ರದೇಶಕ್ಕೆ ತೆರಳುತ್ತಿದ್ದಾಗ ಒಂದು ವ್ಯಾನ್ ಬಸ್ತಾರ್ ಜಿಲ್ಲೆಯಲ್ಲಿ ಕಾಣೆಯಾಯಿತು.

ವಾಹನವನ್ನು ಹುಡುಕಲು ಶೋಧ ಕಾರ್ಯಾಚರಣೆ ಮುಂದುವರಿಸಲಾಯಿತು ಎಂದು ಬಸ್ತಾರ್ ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ತಿಳಿಸಿದರು. ಪೊಲೀಸರು ಹಲವಾರು ಶೋಧ ತಂಡಗಳನ್ನು ಸ್ಥಾಪಿಸಿದ್ದು, ಬಂಡುಕೋರರು ಸ್ಫೋಟಕ ತುಂಬಿದ ವಾಹನವನ್ನು ಅಪಹರಿಸಿರಬಹುದೆಂಬ ಶಂಕೆಯ ಮೇಲೆ ಜಿಲ್ಲೆಯ ಪ್ರವೇಶ ಮತ್ತು ನಿರ್ಗಮನ ದಾರಿಗಳನ್ನು ಮುಚ್ಚಲಾಗಿದೆ.

ಗಣಿಗಾರಿಕೆ ಸಂಸ್ಥೆಗೆ ಕಬ್ಬಿಣ ಅದಿರು ತೆಗೆಯುವುದಕ್ಕಾಗಿ ಬೈಲಾದಿಲಾ ಬೆಟ್ಟದಲ್ಲಿ ಕಲ್ಲುಗಳನ್ನು ಸ್ಫೋಟಿಸುವ ಉದ್ದೇಶಕ್ಕಾಗಿ ಸ್ಫೋಟಕಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎರಡು ಕಾರ್ಖಾನೆಗಳ ಸ್ಫೋಟಕ್ಕೆ ಐದು ಬಲಿ
ಇವಿಎಂ ದೋಷದ ತನಿಖೆಗೆ ಆದೇಶಿಸಿಲ್ಲ: ಆಯೋಗ
ನಕ್ಸಲರಿಂದ ಒತ್ತೆಯಾಳುಗಳ ಬಿಡುಗಡೆ
ಪಟಾಕಿ ಕಾರ್ಖಾನೆಗೆ ಬೆಂಕಿ: 5 ಸಾವು
ಭೂಗತಜಗತ್ತಿನಿಂದ ಬೆದರಿಕೆ: ವರುಣ್ ಬಹಿರಂಗ
ಕಾರು ಮಾರಿದರು, ಕಚೇರಿಗೆ ಕುದುರೆ ಏರಿದರು