ಎಂ.ಪಿ.ವೀರೇಂದ್ರ ಕುಮಾರ್ ನಾಯಕತ್ವದ ಕೇರಳ ಜೆಡಿಎಸ್ ಪಕ್ಷವನ್ನು ರಾಷ್ಟ್ರೀಯ ಜೆಡಿಎಸ್‌ನೊಂದಿಗೆ ವಿಲೀನಗೊಳಿಸುವ ಉದ್ದೇಶವನ್ನು ರಾಜ್ಯದ ಪಕ್ಷ ಕಾರ್ಯಕರ್ತರ ಮೂಲಕ ತಾತ್ಸಾರದಿಂದ ತಳ್ಳಿಹಾಕಲಾಗುತ್ತದೆ ಎಂದು ಹಿರಿಯ ಜೆಡಿಎಸ್ ಮುಖಂಡ ವರ್ಗೀಸ್ ಜಾರ್ಜ್ ಹೇಳಿದ್ದಾರೆ.
ಎರ್ನಾಕುಲಂ ಜಿಲ್ಲಾ ಜೆಡಿಎಸ್ ಕೌನ್ಸಿಲ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವರ್ಗೀಸ್ ಜಾರ್ಜ್, ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ರಾಜ್ಯದ ಜೆಡಿಎಸ್ ಪಕ್ಷವನ್ನು ವಿಲೀನಗೊಳಿಸುವ ಯಾವುದೇ ನೈತಿಕ ಹಕ್ಕಿಲ್ಲ. ಕೇರಳದ ಜೆಡಿಎಸ್ಸನ್ನು ಕೇರಳಿಗರೇ ಕಟ್ಟಿದ್ದಾರೆ. ರಾಜ್ಯದ ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದು ಬೆವರಿನಿಂದ ಕಟ್ಟಿದ್ದಾರೆ ಎಂದು ಖಾರವಾಗಿ ನುಡಿದರು.
ಕೇರಳದಲ್ಲಿ ಜೆಡಿಎಸ್ ಬಲವಾಗಿದೆ. ಹಾಗೂ ಪಂಜಾಯತ್‌ಗಳಲ್ಲಿ ಇದಕ್ಕೆ ಒಂದು ಸಾವಿರ ಸದಸ್ಯರಿದ್ದಾರೆ ಎಂದು ಜಾರ್ಜ್ ವಿವರಿಸಿದರು. ಜಾರ್ಜ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಗೌಡ ಅವರು ಕೇಂದ್ರದಲ್ಲಿ ಯುಪಿಎಗೂ ಬೆಂಬಲ ನೀಡಿದರು. ಅವರಿಗೆ ಪಕ್ಷದ ಮುಖಂಡತ್ವ ಬೇಕಿತ್ತು ಅಷ್ಟೆ ಎಂದು ಜಾರ್ಜ್ ಲೇವಡಿ ಮಾಡಿದರು.
ಜೆಡಿಎಸ್ ಮುಖಂಡರ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರುಗಳೂ ಸೇರಿದಂತೆ ಜು.8ರಂದು ಸಭೆ ನಡೆಯಲಿದೆ. ಜು.12ರಂದು ರಾಜ್ಯ ಕೌನ್ಸಿಲ್ ಸಭೆ ನಡೆಯಲಿದೆ ಎಂದು ಜಾರ್ಜಿ ತಿಳಿಸಿದರು. |