ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇನ್ನೂ 62 ಜನರ ವಿರುದ್ಧ ಗೋಧ್ರಾ ನಂತರದ ಹಿಂಸಾಕಾಂಡ ಕುರಿತು ಎಸ್‌ಐಟಿ ತನಿಖೆಯನ್ನು ಪ್ರಶ್ನಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಗುಜರಾತ್ ಹೈಕೋರ್ಟ್ ನ್ಯಾಯಾಧೀಶೆಯೊಬ್ಬರು ಸೋಮವಾರ ವಿಚಾರಣೆ ನಡೆಸಲು ನಿರಾಕರಿಸಿದ್ದಾರೆ. ಹೈಕೋರ್ಟ್‌ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಎಚ್.ಎನ್. ದೇವಾನಿ ಅದಕ್ಕೆ ವೈಯಕ್ತಿಕ ಕಾರಣಗಳನ್ನು ಹೇಳಿದ್ದಾರೆ.
ಎಸ್‌ಐಟಿ ಅಧಿಕಾರಿಗಳು, ದೂರುದಾರರಾದ ಝಾಕಿಯ ಜಾಫ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಈಗಾಗಲೇ ಉತ್ತರಗಳನ್ನು ಕಳಿಸಿದ್ದು, ಕೋರ್ಟ್ ವಿಚಾರಣೆಯ ನಿರೀಕ್ಷೆಯಲ್ಲಿದ್ದರು. ಬಿಜೆಪಿಯ ಮಾಜಿ ಶಾಸಕ ಕಾಲು ಮಾಲಿವಾಡ್ ಎಸ್‌ಐಟಿ ತನಿಖೆಯನ್ನು ಪ್ರಶ್ನಿಸಿದ ಈ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಮುಖ್ಯಮಂತ್ರಿ ಮತ್ತು ಇತರೆ ರಾಜಕಾರಣಿಗಳ ವಿರುದ್ಧ ತನಿಖೆ ನಿಲ್ಲಿಸಲು ಎಸ್‌ಐಟಿಗೆ ಆದೇಶಿಸುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಸಂದರ್ಭದಲ್ಲಿ ಪೌರರನ್ನು ರಕ್ಷಿಸುವಲ್ಲಿ ಮುಖ್ಯಮಂತ್ರಿ ಉದಾಸೀನ ಮತ್ತು ಪಿತೂರಿ ನಡೆಸಿದರೆಂದು ಜಾಫ್ರಿ ಆರೋಪಗಳನ್ನು ಕುರಿತು ತನಿಖೆ ಸ್ಥಗಿತಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಮಾಜಿ ಸಂಸದರಾದ ಜಾಫ್ರಿಯ ಪತಿ ಅಹಸಾನ್ ಜಾಫ್ರಿ ಅವರ ಪತ್ನಿ ಜಾಫ್ರಿಯ ದೂರನ್ನು ಕುರಿತು ತನಿಖೆಗೆ ಸುಪ್ರೀಂಕೋರ್ಟ್ 3 ತಿಂಗಳ ಕಾಲಾವಕಾಶ ನೀಡಿತ್ತು,
2002ರ ಗಲಭೆ ಪ್ರಕರಣದಿಂದ ಖುಲಾಸೆಯಾಗಿದ್ದ ಮಲಿವಾಡ್, ಜಾಫ್ರಿ ದೂರಿನ ಬಗ್ಗೆ ಕೇವಲ ಪರಿಶೀಲನೆ ನಡೆಸುವಂತೆ ಸುಪ್ರೀಂಕೋರ್ಟ್ ಕೇಳಿದ್ದು, ಯಾವುದೇ ಎಫ್‌ಐಆರ್ ದಾಖಲಾಗದಿರುವುದರಿಂದ ಎಸ್‌ಐಟಿಗೆ ಆಮೂಲಾಗ್ರ ತನಿಖೆ ನಡೆಸುವ ಅಧಿಕಾರವಿಲ್ಲವೆಂದು ಅರ್ಜಿಯಲ್ಲಿ ತಿಳಿಸಿದ್ದರು. |