ಕೆಲವು ರಾಜ್ಯಗಳಲ್ಲಿ ಅಪಾಯಕಾರಿ ಮಟ್ಟವನ್ನು ಮುಟ್ಟಿರುವ ನಕ್ಸಲೀಯ ಪಿಡುಗಿನ ನಿವಾರಣೆ ಕುರಿತು ಮುಂದಿನ ತಿಂಗಳು ನಕ್ಸಲೀಯ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲಾಗುವುದು ಎಂದು ಕೇಂದ್ರ ಗೃಹಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.
ಮಾವೋವಾದಿ ಸಮಸ್ಯೆಯನ್ನು ಕುರಿತು ಕೂಲಂಕಷ ಚರ್ಚೆ ಮತ್ತು ಆಂತರಿಕ ಭದ್ರತೆಗೆ ನಕ್ಸಲೀಯರ ಬೆದರಿಕೆ ನಿಭಾಯಿಸುವ ಯೋಜನೆ ರೂಪಿಸುವುದನ್ನು ಕುರಿತು ಸಭೆಯಲ್ಲಿ ವಿಚಾರವಿನಿಮಯ ನಡೆಸಲಾಗುವುದು ಎಂದು ಲೋಕಸಭೆಯಲ್ಲಿ ಪೂರಕಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರು ಹೇಳಿದ್ದಾರೆ. ನಕ್ಸಲ್ ಮುಖಂಡರಿಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಮಾತುಕತೆ ಪ್ರಕ್ರಿಯೆ ಬರುವಂತೆ ಸೂಚಿಸಲು ಚಿದಂಬರಂ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.
ಎಸ್‌ಪಿ ನಾಯಕ ಮುಲಾಯಂ ಸಿಂಗ್ ಸಲಹೆ ಮೇರೆಗೆ ಈ ಮನವಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಉತ್ತರಪ್ರದೇಶದ ಕೆಲವು ರಾಜ್ಯಗಳಲ್ಲಿ ಶಾಂತಿಮಾತುಕತೆ ಮೂಲಕ ನಕ್ಸಲೀಯ ಸಮಸ್ಯೆ ನಿವಾರಿಸಿದ್ದಾಗಿ ಮುಲಾಯಂ ತಿಳಿಸಿದ್ದರು.ಕಳೆದ ಎರಡು ತಿಂಗಳಲ್ಲಿ ನಕ್ಸಲೀಯ ಸಮಸ್ಯೆ ಗಂಭೀರ ಸ್ವರೂಪ ತಾಳಿದ್ದು, ಈ ಪಿಡುಗಿನ ನಿವಾರಣೆಗೆ ರೂಪಿಸುವ ಯೋಜನೆ ಕುರಿತು ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಲಾಗುವುದೆಂದು ಚಿದಂಬರಂ ತಿಳಿಸಿದರು. |