ಇದು ಸ್ವಲ್ಪ ವಿಚಿತ್ರ, ಆದರೂ ಸತ್ಯ! ಉತ್ತರ ಕಾಶ್ಮೀರದಲ್ಲಿರುವ ಏಕೈಕ ಹಿಂದೂ ಮಂದಿರವಾಗಿರುವ 900 ವರ್ಷಗಳ ಪುರಾತನ ಶಿವದೇವಾಲಯದಲ್ಲಿ ದಿನನಿತ್ಯ ಪೂಜೆ ಸಲ್ಲಿಸುತ್ತಿರುವುದು ಇಬ್ಬರು ಮುಸ್ಲಿಂ ಅರ್ಚಕರು!
ಹಿಮಗಡ್ಡೆಕಟ್ಟಿರುವ ನದಿಗಳ ದಂಡೆಯ ಮೇಲೆ ನೆಲೆಗೊಂಡಿರುವ ಈ ಮಾಮಲಕ ದೇವಾಲಯವಿರುವ ಪಕ್ಕದ ಗ್ರಾಮಗಳ ಕಾಶ್ಮೀರಿ ಪಂಡಿತರು ವಲಸೆ ಹೋದ ಬಳಿಕ ಮೊಹಮ್ಮದ್ ಅಬ್ದುಲ್ಲಾ ಹಾಗೂ ಗುಲಾಂ ಹಸನ್ ಎಂಬವರಿಬ್ಬರು ದೇವಾಲಯದ ಬಾಗಿಲನ್ನು ತೆರೆದು ಗಂಟೆಯ ನಿನಾದ ಮೊಳಗುವುದನ್ನು ಮುಂದುವರಿಯುವಂತೆ ಮಾಡಿದ್ದಾರೆ.
"ನಾವು ದೇವಾಲಯದ ಕಾಳಜಿ ವಹಿಸುವುದರೊಂದಿಗೆ ಪ್ರತಿದಿನ ಆರತಿಯನ್ನೂ ಮಾಡುತ್ತೇವೆ" ಎಂಬುದಾಗಿ ದೇವಾಲಯಕ್ಕೆ ಭೇಟಿನೀಡಿದ ಪಿಟಿಐ ಪ್ರತಿನಿಧಿಗೆ ಗುಲಾಂ ಹಸನ್ ತಿಳಿಸಿದ್ದಾರೆ
ಮೂರು ಅಡಿ ಎತ್ತರದ ಕರಿಕಲ್ಲಿನ ಶಿವಲಿಂಗದ ಸುರಕ್ಷತೆಯೊಂದಿಗೆ ಅಬ್ದುಲ್ಲಾ ಮತ್ತು ಹಸನ್ ಅವರು ಭಕ್ತಾದಿಗಳು ಪ್ರತಿನಿತ್ಯವು ಪ್ರಸಾದ ಸ್ವೀಕರಿಸದೆ ತೆರಳದಂತೆ ನೋಡಿಕೊಳ್ಳುತ್ತಾರೆ.
ರಾಜಾ ಜಯಸೂರ್ಯ ಕಟ್ಟಿಸಿದ ಈ ದೇವಾಲಯಕ್ಕೆ ಅಮರನಾಥ ಯಾತ್ರಿಗಳು ಭೇಟಿ ನೀಡಿ ಮುಂದುವರಿಯುತ್ತಾರೆ. |