ಪಕ್ಷವು ಒಂದು ಸಂಯುಕ್ತರಂಗವಾಗಿ ಕಾರ್ಯನಿರ್ವಹಿಸುವ ಖಚಿತತೆಗಾಗಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಹೊಸದಾಗಿ ಆಯ್ಕೆಯಾಗಿರುವ ಸಂಸದರು ಮಾಡಬೇಕಿರುವ ಮತ್ತು ಮಾಡದಿರಬೇಕಾದ ವಿಚಾರಗಳ ಪಟ್ಟಿಯನ್ನು ಮಾಡಿದ್ದಾರೆ." ಲೋಕಸಭಾ ಚುನಾವಣೆಗಳ ಬಳಿಕ ಪಕ್ಷದ ಕೆಲವು ನಾಯಕರು ಮಾಧ್ಯಮಗಳಿಗೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಇದು ಪಕ್ಷದ ಕುರಿತು ತಪ್ಪು ಸಂದೇಶವನ್ನು ರವಾನಿಸುತ್ತದೆ ಮತ್ತು ಕೆಲವು ನಾಯಕರ ಘನತೆಗೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಇದನ್ನು ನಿಯಂತ್ರಿಸಲು ಆಡ್ವಾಣಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ" ಎಂಬುದಾಗಿ ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ ಅವರು ಬುಧವಾರ ತಿಳಿಸಿದ್ದಾರೆ.ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನಾಚರಣೆಯ ಸಂದರ್ಭ ಸೋಮವಾರ ಮಾತನಾಡುತ್ತಿದ್ದ ವೇಳೆ ಆಡ್ವಾಣಿ ಅವರು, ಪಕ್ಷದಲ್ಲಿ ಹಲವಾರು ವಕ್ತಾರರು ಇದ್ದಾರೆ ಎಂದು ಹೇಳಿದ್ದರು.ಇದಾದ ಒಂದು ದಿನದ ಬಳಿಕ ಪಕ್ಷದ ನೂತನ ಸಂಸದರನ್ನು ಭೇಟಿಯಾಗಿರುವ ಆಡ್ವಾಣಿ ಅವರು ಕಾರ್ಪೋರೇಟ್ ಯುದ್ಧಗಳಿಂದ ದೂರವಿರುವಂತೆ ಮತ್ತು ಲಾಬಿಗಾರರ ಪರವಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳದಿರುವಂತೆ ಹೇಳಿದ್ದಾರೆ. ಇದಲ್ಲದೆ ತಾವು ಸಹಿಮಾಡುವ ಪ್ರತಿದಾಖಲೆಗಳನ್ನು ಸಹಿಗೆ ಮುನ್ನ ಪರಿಶೀಲಿಸುವಂತೆಯೂ ಸಲಹೆ ಮಾಡಿದ್ದಾರೆ.ಇದಲ್ಲದೆ ತಮ್ಮ ಆಪ್ತಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುವ ಮುಂಚಿತವಾಗಿ ಅವರ ಹಿನ್ನೆಲೆಯನ್ನು ಸಮಗ್ರವಾಗಿ ಪರಿಶೀಲಿಸುವಂತೆಯೂ ಹೇಳಿದ್ದಾರೆ. |