ಸೌದಿಯ ರಿಯಲ್ ಎದರು ರೂಪಾಯಿ ಮೌಲ್ಯ ಕುಸಿತಗೊಂಡಿರುವ ಕಾರಣ ಕಳೆದ ವರ್ಷ ಯಾತ್ರೆ ಪೂರೈಸಿರುವ ಹಜ್ ಯಾತ್ರಿಕರು ಹೆಚ್ಚುವರಿ ಹಣ ನೀಡುವಂತೆ ಕೇಳಲಾಗಿದೆ ಎಂದು ಸಿಪಿಐ-ಎಂ ಸದಸ್ಯರೊಬ್ಬರು ರಾಜ್ಯಸಭೆಯಲ್ಲಿ ಹೇಳಿದರು.
ಈ ವಿಚಾರವನ್ನು ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಎತ್ತಿದ ಸಿಪಿಐ-ಎಂನ ಮೊಯ್ನುಲ್ ಹಸನ್ ಅವರು ಮುಂಬೈ ಹಜ್ ಸಮಿತಿಯು ಹೆಚ್ಚವರಿ ಮೊತ್ತಕ್ಕಾಗಿ ಸಹಿಯಿಲ್ಲದ ವೃತ್ತಿಪರವಲ್ಲದ ಪತ್ರವನ್ನು ಹಜ್ ಯಾತ್ರಿಕರಿಗೆ ಕಳುಹಿಸಿರುವುದಾಗಿ ತಿಳಿಸಿದರು.
"ರಿಯಲ್‌ನ ವಿನಿಮಯ ದರವು ಕುಸಿತಗೊಂಡಲ್ಲಿ ಹಜ್ ಸಮಿತಿಯು ಹಣವನ್ನು ಯಾತ್ರಿಕರಿಗೆ ಹಿಂತಿರುಗಿಸುವುದೇ" ಎಂಬುದಾಗಿ ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ಹಸನ್‌ರನ್ನು ಅವರ ಎಡಪಕ್ಷಗಳ ಸಹೋದ್ಯೋಗಿಗಳು ಬೆಂಬಲಿಸಿದರು.
ಕಳೆದೊಂದು ವರ್ಷದಲ್ಲಿ ಭಾರತೀಯ ಕರೆನ್ಸಿಯು ರಿಯಲ್ ವಿರುದ್ಧ ಸುಮಾರು ಶೇ.13ರಷ್ಟು ಕುಸಿತ ಕಂಡಿದೆ. ಪ್ರಸಕ್ತ ಒಂದುರಿಯಲ್ 13 ರೂಪಾಯಿಗೆ ಸಮವಾಗಿದೆ. |