ಬಿಜೆಪಿ ಸಂಸದ ವರುಣ್ ಗಾಂಧಿ ಅವರ ಭದ್ರತೆ ಕುರಿತಂತೆ ಗೃಹಸಚಿವ ಪಿ.ಚಿದಂಬರಂ ಅವರೊಂದಿಗಿನ ಭೇಟಿ ತೃಪ್ತಿದಾಯಕವಾಗಿಲ್ಲ ಎಂಬುದಾಗಿ ಬಿಜೆಪಿ ನಾಯಕಿ ಸುಷ್ಮಾಸ್ವರಾಜ್ ಗುರುವಾರ ಹೇಳಿದ್ದಾರೆ.
"ಅವರು ಏನು ಹೇಳಿದ್ದಾರೋ ಅದರಿಂದ ನಾನು ತೃಪ್ತಿಹೊಂದಿಲ್ಲ ಎಂಬುದಷ್ಟನ್ನೆ ನಾನು ನಿಮಗೆ ಹೇಳಬಹುದು. ನಾನು ಭ್ರಮನಿರಸನ ಗೊಂಡಿದ್ದೇನೆ" ಎಂಬುದಾಗಿ ಅವರು ಚಿದು ಭೇಟಿಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಆದರೆ ಭೇಟಿಯ ವೇಳೆ ನಡೆದ ಮಾತುಕತೆಗಳ ವಿವರವನ್ನು ನೀಡಲು ಅವರು ನಿರಾಕರಿಸಿದ್ದಾರೆ. ಸಭೆಯಲ್ಲಿ ನಡೆದ ಮಾತುಕತೆಯು ಗುಪ್ತವಾಗಿದ್ದು ಅದನ್ನು ಬಹಿರಂಗ ಪಡಿಸಲು ತಾನು ಇಚ್ಛಿಸುವುದಿಲ್ಲ. ಈ ಕುರಿತು ಬರೆಯಲಾದ ಪತ್ರವನ್ನು ಗೌರವಿಸಲು ತಾನು ಇಷ್ಟಪಡುವುದಾಗಿ ಅವರು ನುಡಿದರು.
ಚಿದಂಬರಂ ಬರೆದಿರುವ ಪತ್ರದ ಸೋರಿಕೆಯ ಕುರಿತು ಸುಷ್ಮಾ ಮಾಡಿರುವ ಆಪಾದನೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುಷ್ಮಾ, "ಅವರು ಇದನ್ನು ಸ್ವೀಕರಿಸಿದ್ದಾರೆ. ಇದೊಂದು ಸೋರಿಕೆಯಲ್ಲ, ಇದನ್ನು ಅಧಿಕೃತವಾಗಿ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ನಾನು ಅವರಿಗೆ ಹೇಳಿದೆ" ಎಂಬುದಾಗಿ ನುಡಿದರು.
ವರುಣ್ ಗಾಂಧಿಗೆ ನೀಡಿರುವ ಭದ್ರತಾ ವ್ಯವಸ್ಥೆಗಳ ಕುರಿತು ತನಗೆ ಗೃಹಸಚಿವರು ಬರೆದಿರುವ ಪತ್ರವನ್ನು ಅವರ ಬಹಿರಂಗ ಪಡಿಸಿದ್ದಾರೆ ಎಂಬುದಾಗಿ ಸುಷ್ಮಾ ಬುಧವಾರ ಆರೋಪಿಸಿದ್ದರು. |