ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗುಜರಾತ್ ಕಳ್ಳಭಟ್ಟಿ ದುರಂತ, ಸಾವಿನ ಸಂಖ್ಯೆ 120ಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್ ಕಳ್ಳಭಟ್ಟಿ ದುರಂತ, ಸಾವಿನ ಸಂಖ್ಯೆ 120ಕ್ಕೆ
ಗುಜರಾತಿನ ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 120ಕ್ಕೇರಿದೆ. ನಾಲ್ಕು ಆಸ್ಪತ್ರೆಯ ವೈದ್ಯರು ಕಳ್ಳಭಟ್ಟಿ ಸೇವನೆಯಿಂದ ಅಸ್ಪಸ್ಥಗೊಂಡವರನ್ನು ಬದುಕಿಸಲು ಹರಸಾಹಸ ನಡೆಸುತ್ತಿದ್ದರೂ, ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ.

ಕಳ್ಳಭಟ್ಟಿ ಸೇವಿಸಿದ ಬಳಿಕ ಜನರು ಸೋಮವಾರದಿಂದ ಜೀವಕಳೆದುಕೊಳ್ಳಲು ಆರಂಭಿಸಿದ್ದು, ಶುಕ್ರವಾರ ಮುಂಜಾನೆ ವೇಳೆಗೆ ಸತ್ತವರ ಸಂಖ್ಯೆ 120ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿವಿಲ್ ಆಸ್ಪತ್ರೆ, ಎಲ್.ಜಿ. ಆಸ್ಪತ್ರೆ, ಶಾರದಾಬೆನ್ ಆಸ್ಪತ್ರೆ ಮತ್ತು ವಿ.ಎಸ್ ಆಸ್ಪತ್ರೆಯಲ್ಲಿ 149 ಮಂದಿ ದಾಖಲಾಗಿದ್ದು ಅವರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತುರ್ತುನಿಘಾ ಘಟಕವು ಈ ರೋಗಿಗಳಿಂದ ಭರ್ತಿಯಾಗಿದ್ದು, ಹೊರಗಡೆ ಸುಮಾರು 60 ಮಂದಿ ವಿವಿಧ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾರಾಯಿಯ ನಿಧಾನ ವಿಷವು ರೋಗಿಳ ನರಗಳ ಮೇಲೆ ಪರಿಣಾಮ ಬಿರುತ್ತಿದ್ದು, ಇದು ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. ಕೆಲವು ರೋಗಿಗಳು ಮ‌ೂರು ದಿನಗಳಿಗೂ ಅಧಿಕಕಾಲದಿಂದ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ.

1989ರಲ್ಲಿ ರಾಜ್ಯದಲ್ಲಿ ಇಂತಹುದೇ ಘಟನೆ ನಡೆದಿದ್ದು, ಆ ಸಂಧರ್ಭದಲ್ಲಿ 132 ಮಂದಿ ಸಾವಿಗೀಡಾಗಿದ್ದರು ಎಂಬುದಾಗಿ ಅವರು ತಿಳಿಸಿದರು.

ಸರ್ಕಾರಕ್ಕೆ ಮುಖಭಂಗ
ಗುಜರಾತಿನಲ್ಲಿ ಅಧಿಕೃತವಾಗಿ ಸಾರಾಯಿ ಸೇವನೆ ಮತ್ತು ಮಾರಾಟ ನಿಷೇಧವಾಗಿರುವ ಕಾರಣ ಈ ಘಟನೆಯಿಂದ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದೆ. ಕಳ್ಳಭಟ್ಟಿ ತಯಾರಕರು ಮತ್ತು ಮಾರಾಟಗಾರರ ಪತ್ತೆಗೆ ಶೋಧ ಆರಂಭಿಸಿದೆ. ಗುರುವಾರ 1,200 ಸಾರಾಯಿ ತಾಣಗಳನ್ನು ಮುಚ್ಚಿದ್ದು, ಇದರಲ್ಲಿ ತೊಡಗಿರುವ ಸುಮಾರು 800 ಮಂದಿಯನ್ನು ಬಂಧಿಸಲಾಗಿದೆ.

ನಗರಗಳು, ಪಟ್ಟಣಗಳು ಹಾಗೂ ಹಳ್ಳಿಗಳ ಕೊಳಗೇರಿ ಪ್ರದೇಶಗಳಲ್ಲಿ ಇವುಗಳ ಮಾರಾಟ ಮಾಡಲಾಗುತ್ತಿತ್ತು ಪೊಲೀಸಧಿಕಾರಿ ತಿಳಿಸಿದ್ದಾರೆ.

ದುರಂತಕ್ಕೆ ಕಾರಣವಾದ ಸಾರಾಯಿಯನ್ನು ಮಾರಾಟ ಮಾಡಿರುವ ವ್ಯಕ್ತಿಯ ಪತ್ತೆಗಾಗಿ ಪೊಲೀಸ್ ತಂಡವೊಂದು ಇಲ್ಲಿಂದ 35 ಕಿಮೀ ದೂರದಲ್ಲಿರುವ ಮೆಮಹದಾಬಾಗಿದೆ ತೆರಳಿದೆ. ಈತನ ಬಗ್ಗೆ ಬುಧವಾರ ಬಂಧನಕ್ಕೀಡಾಗಿರುವ ಕುಖ್ಯಾತ ಕಳ್ಳಭಟ್ಟಿ ದೊರೆ ಹರಿಶಂಕರ್ ಕಹಾರ್ ಮಾಹಿತಿ ನೀಡಿದ್ದ.

ಆಯೋಗ ರಚನೆ:
ಪ್ರಕರಣದ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನಾಲ್ಕು ಸದಸ್ಯರ ಆಯೋಗವನ್ನು ಸರ್ಕಾರ ನೇಮಿಸಿದೆ. ಅದು ತನ್ನ ವರದಿಯನ್ನು ನವೆಂಬರ್ 30ರೊಳಗಾಗಿ ಸಲ್ಲಿಸಲಿದೆ.

ಗುಜರಾತ್ ಮದ್ಯನಿಷೇಧ ಮಾಡಿರುವ ರಾಷ್ಟ್ರದ ಏಕಮಾತ್ರ ರಾಜ್ಯವಾಗಿದೆ. ಗಾಂಧಿ ಹುಟ್ಟಿದ ಈ ನಾಡಿನಲ್ಲಿ ಮದ್ಯಸೇವನೆ ಮತ್ತು ಮಾರಾಟ ನಿಷೇಧ.
ಆದರೆ ಅದಿಕೃತ ಮದ್ಯಮಾರಾಟವಿಲ್ಲದ ಕಾರಣ ಹಲವಾರು ಕಳ್ಳಭಟ್ಟಿ ತಯಾರಕರು ಸಾರಾಯಿ ತಯಾರಿಸುತ್ತಿದ್ದು, ರಾಜ್ಯದ ಹೊರಗಿನಿಂದ ಮದ್ಯತರಿಸಿ ಸೇವಿಸಲು ಅಸಾಧ್ಯವಾಗಿರುವ ಬಡವರ್ಗದ ಜನತೆ ಇಂತಹ ಸಾರಾಯಿಗಳನ್ನು ಸೇವಿಸುತ್ತಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜು.22ರ ಗ್ರಹಣದ ಆಂಶಿಕ ಭಾಗ ಭಾರತದಲ್ಲಿ ವೀಕ್ಷಣೆ
ಮಾಲೆಗಾಂವ್ ಸ್ಫೋಟ: ಸಾಧ್ವಿ ಪ್ರಜ್ಞಾಗೆ ಜಾಮೀನ್ ನಿರಾಕರಣೆ
ಕಳ್ಳಭಟ್ಟಿ: ಸಾವಿನ ಸಂಖ್ಯೆ 86ಕ್ಕೆ ಏರಿಕೆ
ಅನರನಾಥ ದೇಗುಲಕ್ಕೆ ತೆರುಳುತ್ತಿದ್ದ ಹೆಲಿಕಾಪ್ಟರ್ ಪತನ
ಠಾಕ್ರೆ ಯಮರಾಜನನ್ನು ಜಯಿಸಲಿ: ಬಚ್ಚನ್ ಹಾರೈಕೆ
ಸಲಿಂಗಕಾಮ: ಸರ್ಕಾರದಿಂದ ಕೋರ್ಟ್ ಆದೇಶ ಪರಿಶೀಲನೆ