ಯುವ ಸೇನಾ ಕ್ಯಾಫ್ಟನ್ ಒಬ್ಬಾತ ಕಾನೂನುಬಾಹಿರವಾಗಿ ಮದ್ಯ ಮರಾಟ ಮಾಡುವ ವಿಚಾರವನ್ನು ಪತ್ರಕರ್ತರೊಬ್ಬರು ಕುಟುಕು ಕಾರ್ಯಾಚರಣೆ ಮೂಲಕ ಬಹಿರಂಗ ಪಡಿಸಿದ್ದಾರೆ.
ಇದೀಗ ತಪ್ಪಿತಸ್ಥ ಕ್ಯಾಫ್ಟನ್ ಗೌತಮ್ ಪುರಿ ಎಂಬಾತ ವಿರುದ್ಧ ಕೋರ್ಟ್ ಮಾರ್ಷಲ್ ಪ್ರಕ್ರಿಯೆಗೆ ಆದೇಶ ನೀಡಲಾಗಿದೆ. ಗುಜರಾತಿನ ಪ್ರಮುಖ ದೈನಿಕ ದಿವ್ಯ ಭಾಸ್ಕರ್‌ನ ವರದಿಗಾರ ಜಯೇಶ್ ಶಾ ಅವರು ಈ ಕಾರ್ಯಾಚರಣೆ ನಡೆಸಿದ್ದರು.
"ಈ ನಾಚಿಕೆಗೇಡಿನ ವಿಚಾರವು ಪತ್ರಕರ್ತರ ಮೂಲಕ ತನ್ನ ಗಮನಕ್ಕೆ ಬಂದ ತಕ್ಷಣ ತಾನು ಕೋರ್ಟ್ ಮಾರ್ಷಲ್ ಪ್ರಕ್ರಿಯೆಗೆ ಅದೇಶ ನೀಡಿದ್ದೇನೆ" ಎಂಬುದಾಗಿ ಆರ್.ಕೆ. ಭಾರದ್ವಾಜ್ ಹೇಳಿದ್ದಾರೆ. ಅವರು ಪ್ರಸಕ್ತ ಸೇನಾಠಾಣೆಯ ಮುಖ್ಯಸ್ಥರಾಗಿದ್ದಾರೆ.
ಸೇನಾ ನಿಭಾವಣೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುರಿ ಕಾನೂನುಬಾಹಿರವಾಗಿ ಮದ್ಯಮರಾಟ ಮಾಡುತ್ತಿರುವುದು ಅರಿವಿಗೆ ಬಂದ ಪತ್ರಕರ್ತ ಜಯೇಶ್ ಅವರು, ತಾನು ಮದ್ಯ ಖರೀದಿಸಲು ಆಸಕ್ತವಾಗಿರುವುದಾಗಿ ತಿಳಿಸಿದ್ದರು.
"ಕ್ಯಾಪ್ಟನ್‌ಗೆ ಇದು ನನ್ನ ಪ್ರಥಮ ಕರೆಯಾಗಿತ್ತು. ತಾನು ಆತನ ಮೊಬೈಲ್‌ಗೆ ಕರೆ ನೀಡಿ ಮದ್ಯ ಖರೀದಿಯ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಆತ ತನ್ನ ದೈನಂದಿನ ಗ್ರಾಹಕರಿಗೆ ಕಾಯುತ್ತಿರುವಂತೆ, ನನ್ನನ್ನು ಒಂದು ಆಸ್ಪತ್ರೆಯ ರಸ್ತೆಗೆ ಬರಹೇಳಿದ್ದು, ತನ್ನ ಬಳಿ ವೊಡ್ಕಾ ಮಾತ್ರ ಲಭ್ಯವಿದ್ದು, ಬಾಟಲೊಂದರ 750 ರೂಪಾಯಿ ದರ ವಿಧಿಸುವುದಾಗಿ ತಿಳಿಸಿದ" ಎಂಬುದಾಗಿ ಶಾ ಹೇಳಿದ್ದಾರೆ.
ನಿರ್ದಿಷ್ಟ ಜಾಗಕ್ಕೆ ತಾನು ತಲುಪಿದಾಗ ಪುರಿ ತನ್ನ ಕಾರಿನ(DL 7C D 5908) ಹಿಂದಿನ ಭಾಗದಲ್ಲಿ ಇರಿಸಿದ್ದ ನಾಲ್ಕು ಬಾಟಲಿಗಳಲ್ಲಿ ಎರಡನ್ನು ನೀಡಿದ್ದು 1,400 ರೂಪಾಯಿ ದರ ವಿಧಿಸಿದ. ತನ್ನ ಖಾಸಗಿ ಹಾಗೂ ಅಧಿಕೃತ ಫೋನ್‌ಗಳಿಗೆ ಮದ್ಯಮಾರಾಟಕ್ಕಾಗಿ ಕರೆಗಳನ್ನು ಸ್ವೀಕರಿಸಲು ಕ್ಯಾಪ್ಟನ್ ಪುರಿ ನಿರ್ಲಜ್ಜವಾಗಿದ್ದ ಎಂದು ಅವರು ಹೇಳಿದ್ದಾರೆ.
ಶಾ ಹಾಗೂ ಪುರಿ ನಡುನಿನ ದೂರವಾಣಿ ಮಾತುಕತೆ ಪುರಿ: ಇಲ್ಲಿ ಕೇಳಿ, ಪಾರ್ಟಿಯೊಂದಕ್ಕೆ ತೆಗೆದಿಟ್ಟಿದ್ದೇನೆ. ಅದನ್ನು ನಿಮಗೆ 750ಕ್ಕೆ ನೀಡುತ್ತೇನೆ. ಶಾ: ವೋಡ್ಕಾ ಇದೆಯಾ? ಪುರಿ: ಇದೆ. ಆದರೆ 750ರೂಗೆ ದೊರೆಯುತ್ತದೆ. ಶಾ: ಆದರೆ, ಎಲ್ಲ ಬೇಡ ಸಾರ್ ಪುರಿ: ಅರೆ ಯಾರ್ ಐಸಾ ತೋಡಿ ಹೋತಾ ಹೈ. ನಾನು ನಿಮ್ಮನ್ನು ನಿರೀಕ್ಷಿಸುತ್ತೇನೆ. ನನ್ನ ಹಣ ಪೋಲಾಗುತ್ತದೆ. ಶಾ: ಎಲ್ಲಿ ಸಿಗುತ್ತೀರಿ ಪುರಿ: ಅದೇ ಜಾಗ. ವೈದ್ಯರ ಗಲ್ಲಿಯಲ್ಲಿ. ಸ್ವಲ್ಪ ಬೇಗ ಬನ್ನಿ |